ನವದೆಹಲಿ: ರಾಷ್ಟ್ರಪತಿ ಜೊತೆ ಸೌತ್ ಆಫ್ರಿಕಾ ಪ್ರವಾಸ ಮಾಡಲಿರುವ ಸಚಿವ ವಿ ಸೋಮಣ್ಣ ಇದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಭಾರತ ಮತ್ತು ಅಂಗೋಲಾ ದೇಶದ ರಾಜತಾಂತ್ರಿಕ ಸಂಬಂಧದ 40 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಫ್ರಿಕಾ ಪ್ರವಾಸ ಮಾಡಲಿದ್ದಾರೆ. ಒಟ್ಟು ಆರು ದಿನಗಳ ಪ್ರವಾಸ ಇದಾಗಿದ್ದು ಈ ಕಾರ್ಯಕ್ರಮದಲ್ಲಿ ಭಾರತದ ನಿಯೋಗದ ಜೊತೆ ವಿ ಸೋಮಣ್ಣ ಕೂಡಾ ಭಾಗಿಯಾಗಲಿದ್ದಾರೆ.
ವಿ ಸೋಮಣ್ಣ ಜೊತೆ ಗುಜರಾತ್ ಮತ್ತು ತೆಲಂಗಾಣದ ಸಂಸದರೂ ಇರಲಿದ್ದಾರೆ. ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ಕೇಂದ್ರ ಸಚಿವರಾದ ಬಳಿಕ ವಿ ಸೋಮಣ್ಣ ಮಾಡುತ್ತಿರುವ ಮೊದಲ ಅಧಿಕೃತ ವಿದೇಶ ಪ್ರವಾಸವಾಗಿದೆ. ಹೀಗಾಗಿ ಸಹಜವಾಗಿಯೇ ಅವರು ಖುಷಿಯಾಗಿದ್ದಾರೆ. ಇದು ನನ್ನಂತಹ ಸಾಮಾನ್ಯನಿಗೆ ನೀಡಿದ ಗೌರವ ಎಂದು ಖುಷಿ ಹಂಚಿಕೊಂಡಿದ್ದಾರೆ.