ನವದೆಹಲಿ: ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದ ವಿಶ್ವಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಗಿಫ್ಟ್ ನೀಡಿದೆ.
ಏಕದಿನ ವಿಶ್ವಕಪ್ ಗೆದ್ದಹರ್ಮನ್ ಪ್ರೀತ್ ಕೌರ್ ಮತ್ತು ತಂಡದ ಸದಸ್ಯರು ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದೆ. ಈ ವೇಳೆ ರಾಷ್ಟ್ರಪತಿಗಳಿಗೆ ಟ್ರೋಫಿಯನ್ನು ನೀಡಿ ಕ್ರಿಕೆಟಿಗರು ಫೋಟೋಗೆ ಪೋಸ್ ನೀಡಿದ್ದಾರೆ.
ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ತಂಡದ ಎಲ್ಲಾ ಸದಸ್ಯರ ಸಹಿಯುಳ್ಳ ಟೀಂ ಇಂಡಿಯಾ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ರಾಷ್ಟ್ರಪತಿಗಳ ಜೊತೆ ಸಂವಾದವನ್ನೂ ನಡೆಸಿದ್ದಾರೆ. ಭಾರತದಲ್ಲಿ ಈ ವಿಶ್ವಕಪ್ ನಡೆಯುತ್ತದೆ ಎಂದು ಗೊತ್ತಾದಾಗ ಈ ಬಾರಿ ಕಪ್ ನಮ್ಮ ಕೈ ತಪ್ಪಿ ಹೋಗಬಾರದು ಎಂದು ಅಂದುಕೊಂಡಿದ್ದೆವು ಎಂದಿದ್ದಾರೆ.
ನಿನ್ನೆ ಪ್ರಧಾನಿ ನಿವಾಸಕ್ಕೂ ಕ್ರಿಕೆಟಿಗರು ಭೇಟಿ ನೀಡಿದ್ದರು. ಈ ವೇಳೆ ಪ್ರಧಾನಿ ಮೋದಿಗೂ ಜೆರ್ಸಿಯೊಂದನ್ನು ಉಡುಗೊರೆ ನೀಡಿ ಕಪ್ ಜೊತೆಗೆ ಫೋಟೋ ಸೆಷನ್ ನಡೆಸಿದ್ದರು.