ನವದೆಹಲಿ: ಮಹಿಳಾ ವಿಶ್ವಕಪ್ ಕ್ರಿಕೆಟ್ ಗೆದ್ದ ಭಾರತ ತಂಡ ನಿನ್ನೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ನಿಮ್ಮ ಸ್ಕಿನ್ ರೊಟೀನ್ ಏನು ಎಂದು ಹರ್ಲಿನ್ ಡಿಯೋಲ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ನಾಚಿಕೊಂಡಿದ್ದಾರೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮಹಿಳಾ ಕ್ರಿಕೆಟ್ ತಂಡ ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ಮೋದಿ ಮತ್ತು ಆಟಗಾರರ ಜೊತೆ ಹಲವು ಸ್ವಾರಸ್ಯಕರ ಮಾತುಕತೆ ನಡೆದಿದೆ. ಇದನ್ನು ಸ್ವತಃ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಮೋದಿ ಕೂಡಾ ತಂಡದ ಆಟಗಾರ್ತಿಯರ ಕಾಲೆಳೆದಿದ್ದಾರೆ. ಈ ವೇಳೆ ತಂಡದಲ್ಲಿ ಸದಾ ತಮಾಷೆ ಮಾಡಿಕೊಂಡು ಎಲ್ಲರನ್ನೂ ನಗಿಸುವ ಆಟಗಾರ್ತಿ ಯಾರು ಎಂದು ಪ್ರಶ್ನೆ ಎದುರಾಯ್ತು. ಆಗ ಜೆಮಿಮಾ, ಹರ್ಲಿನ್ ಡಿಯೋಲ್ ಹೆಸರು ಹೇಳಿದರು. ಇಲ್ಲಿಯೂ ಅದೇ ರೀತಿ ಎಲ್ಲರ ನಗುತ್ತಿದ್ದಿರಾ ಎಂದು ಮೋದಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಹರ್ಲಿನ್ ಇಲ್ಲ ಸಾರ್, ಇಲ್ಲಿ ಗಂಭೀರವಾಗಿರು ಎಂದು ತಂಡದಲ್ಲಿ ಎಲ್ಲರೂ ನನಗೆ ಗದರಿಸಿದ್ರು. ಅದಕ್ಕೇ ಸುಮ್ಮನಿದ್ದೆ ಎಂದಿದ್ದಾರೆ. ಇದಕ್ಕೆ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
ಇದರ ನಡುವೆ ಹರ್ಲಿನ್ ಸರ್ ನಿಮ್ಮ ಸ್ಕಿನ್ ರೊಟೀನ್ ಏನು, ಯಾವಾಗಲೂ ನಿಮ್ಮ ಸ್ಕಿನ್ ತುಂಬಾ ಹೊಳೆಯುತ್ತಿರುತ್ತದೆ ಎಂದಿದ್ದಾರೆ. ಇದಕ್ಕೆ ಮೋದಿ ಜೋರಾಗಿ ನಕ್ಕಿದ್ದಾರೆ. ಬಳಿಕ ನಾನು ಇದುವರೆಗೆ ಇದರ ಬಗ್ಗೆ ಧ್ಯಾನ ನೀಡಿರಲಿಲ್ಲ ಎಂದಿದ್ದಾರೆ. ಇದಕ್ಕೆ ಹರ್ಲಿನ್ ಅವರೇ ಬಹುಶಃ ಇದೆಲ್ಲಾಜನರ ಪ್ರೀತಿಯ ಫಲವಾಗಿರಬಹುದು ಎಂದಿದ್ದಾರೆ.