ನವದೆಹಲಿ: ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದೆ. ಈ ವೇಳೆ ಫೋಟೋಗೆ ಪೋಸ್ ನೀಡುವಾಗ ಮೋದಿ ತಪ್ಪಿಯೂ ಟ್ರೋಫಿಯನ್ನು ಮುಟ್ಟಿಲ್ಲ. ಇನ್ನು, ಕ್ರಿಕೆಟಿಗರು ಮೋದಿಗೆ ಕೊಟ್ಟ ಗಿಫ್ಟ್ ಏನು ಇಲ್ಲಿದೆ ನೋಡಿ ವಿವರ.
ವಿಶ್ವಕಪ್ ಟ್ರೋಫಿ ಎನ್ನುವುದು ಕ್ರಿಕೆಟಿಗರ ಶ್ರಮದ ಫಲ. ಹೀಗಾಗಿ ಮೋದಿ ಅದನ್ನು ಹಿಡಿದುಕೊಳ್ಳಲಿಲ್ಲ. ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ ಟ್ರೋಫಿಯನ್ನು ಪ್ರಧಾನಿ ಮೋದಿ ಮುಂದೆ ಹಿಡಿದು ನಿಂತರು. ಟ್ರೋಫಿ ಮುಂದೆ ಮೋದಿ ಕೈ ಕಟ್ಟಿ ನಿಂತು ಪೋಸ್ ನೀಡಿದ್ದಾರೆ.
ಇನ್ನು, ಕ್ರಿಕೆಟಿಗರೂ ಮೋದಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ವಿಶ್ವ ವಿಜೇತ ತಂಡದ ಎಲ್ಲಾ ಸದಸ್ಯರ ಸಹಿಯನ್ನು ಒಳಗೊಂಡ ನಮೋ ಹೆಸರಿನ ಟೀಂ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಹಿಂದೆ ಪುರುಷ ಕ್ರಿಕೆಟಿಗರು ಟಿ20 ವಿಶ್ವಕಪ್ ಗೆದ್ದಾಗ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಆಟಗಾರರಿಗೆ ಆತಿಥ್ಯ ನೀಡಿದ್ದರು. ಇದೀಗ ಮಹಿಳಾ ತಾರೆಯರಿಗೂ ಅದೇ ಜಾಗದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.