ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ವಿಮಾನ ನಿಲ್ದಾಣದಲ್ಲಿ ತಿಲಕವಿಡಲು ಬಂದಾಗ ಬೇಡ ಎನ್ನುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಭಾರತ ಮಹಿಳಾ ಕ್ರಿಕೆಟಿಗರು ಮೊನ್ನೆಯಷ್ಟೇ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇಂದು ಪ್ರಧಾನಿ ಮೋದಿಯನ್ನು ಕ್ರಿಕೆಟಿಗರು ಭೇಟಿಯಾಗಲಿದ್ದು ಅದಕ್ಕಾಗಿ ದೆಹಲಿಗೆ ಬಂದಿಳಿದಿದ್ದಾರೆ. ಈ ವೇಳೆ ಹೋದಲೆಲ್ಲಾ ಆಟಗಾರ್ತಿಯರಿಗೆ ತಿಲಕ ಹಚ್ಚಿ, ಹೂಮಳೆಗರೆದು ಭರ್ಜರಿ ಸ್ವಾಗತ ಮಾಡಲಾಗುತ್ತಿದೆ.
ಈ ನಡುವೆ ವಿಮಾನ ನಿಲ್ದಾಣದಲ್ಲಿ ಎಲ್ಲಾ ಕ್ರಿಕೆಟಿಗರಿಗೂ ತಿಲಕವಿಟ್ಟು ಹೂ ನೀಡಿ ಸ್ವಾಗತ ಕೋರಲಾಗುತ್ತದೆ. ಈ ವೇಳೆ ಎಲ್ಲಾ ಕ್ರಿಕೆಟಿಗರೂ ತಿಲಕವಿಟ್ಟುಕೊಳ್ಳುತ್ತಾರೆ. ಆದರೆ ಸ್ಮೃತಿ ತಮ್ಮ ಸರದಿ ಬಂದಾಗ ಬೇಡ ಎನ್ನುತ್ತಾರೆ ಮತ್ತು ಹೂ ಮಾತ್ರ ತೆಗೆದುಕೊಂಡು ಮುಂದೆ ನಡೆಯುತ್ತಾರೆ.
ಇದಕ್ಕೆ ನೆಟ್ಟಿಗರು ಪ್ರಶ್ನೆ ಮಾಡಿದ್ದು ಒಬ್ಬ ಹಿಂದೂ ಆಗಿ ಸ್ಮೃತಿ ಯಾಕೆ ತಿಲಕವಿಟ್ಟುಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಏನೋ ವೈಯಕ್ತಿಕ ಕಾರಣವಿರುತ್ತದೆ, ಅವರು ತಂಡದ ಇತರೆ ಸದಸ್ಯರ ಜೊತೆ ವಿಶ್ವಕಪ್ ಗೆ ಮುನ್ನ ಉಜ್ಜೈನಿ ಮಹಾಕಾಳೇಶ್ವರನ ದರ್ಶನ ಪಡೆದಿದ್ದರು. ಈ ವಿಚಾರದಲ್ಲಿ ವಿವಾದ ಬೇಡ ಎಂದಿದ್ದಾರೆ.