Select Your Language

Notifications

webdunia
webdunia
webdunia
webdunia

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

Jay Shah-Smriti Mandhana-Harmanpreet Kaur

Krishnaveni K

ಮುಂಬೈ , ಬುಧವಾರ, 5 ನವೆಂಬರ್ 2025 (09:29 IST)
Photo Credit: X
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಾರೆಯರು ವಿಶ್ವಕಪ್ ಗೆದ್ದ ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ಐಸಿಸಿ ಅಧ್ಯಕ್ಷ ಜಯ್ ಶಾ ಕಾಲಿಗೆ ನಮಸ್ಕರಿಸಿದ್ದಕ್ಕೆ ಕೆಲವರು ಟೀಕಿಸಿದ್ದರು. ಆದರೆ ಮಹಿಳಾ ತಾರೆಯರಿಗೆ ಜಯ್ ಶಾ ಮೇಲೆ ಇಷ್ಟು ಗೌರವ ಇರುವುದಕ್ಕೂ ಕಾರಣವಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಮಗ ಎಂಬ ಕಾರಣಕ್ಕೆ ಜಯ್ ಶಾಗೆ ಬಿಸಿಸಿಐ, ಐಸಿಸಿಯಲ್ಲಿ ಉನ್ನತ ಹುದ್ದೆ ಸಿಕ್ಕಿದೆ ಎಂದು ಟೀಕಿಸುವವರು ಇದ್ದಾರೆ. ರಾಜಕೀಯ ಎನೇ ಇರಲಿ, ಬಿಸಿಸಿಐನಲ್ಲಿದ್ದಾಗ ಜಯ್ ಶಾ ಭಾರತ ಮಹಿಳಾ ಕ್ರಿಕೆಟ್ ರಂಗದಲ್ಲಿ ಅನೇಕ ಬದಲಾವಣೆ ತಂದಿದ್ದಾರೆ.

ಡಬ್ಲ್ಯುಪಿಎಲ್ ಎಂಬ ಟೂರ್ನಿ ಯೋಜನೆ ಹಂತದಲ್ಲೇ ತುಂಬಾ ದಿನಗಳಿಂದ ಇತ್ತು. ಆದರೆ ಜಯ್ ಶಾ ಇದನ್ನು ಕಾರ್ಯರೂಪಕ್ಕೆ ತಂದರು. ಪುರುಷರ ಐಪಿಎಲ್ ನಂತೇ ಡಬ್ಲ್ಯುಪಿಎಲ್ ಗೂ ರಂಗು ತಂದು ಅನೇಕ ಪ್ರತಿಭೆಗಳು ಭಾರತ ತಂಡಕ್ಕೆ ಸೇರ್ಪಡೆಯಾದರು. ಶ್ರೀ ಚರಣಿ, ಕ್ರಾಂತಿ ಗೌಡ್, ಶ್ರೇಯಾಂಕ ಪಾಟೀಲ್ ಸೇರಿದಂತೆ ಹಲವು ತಾರೆಯರು ಬೆಳಕಿಗೆ ಬಂದಿದ್ದು ಡಬ್ಲ್ಯುಪಿಎಲ್ ನಿಂದ.

ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಷ್ಟು ವೇತನವಿರಲಿಲ್ಲ. ಆದರೆ ಜಯ್ ಶಾ ಈ ಅಸಮಾನತೆಯನ್ನು ನೀಗಿಸಿ ಪುರುಷ ಕ್ರಿಕೆಟಿಗರಷ್ಟೇ ವೇತನ ಮಹಿಳಾ ಕ್ರಿಕೆಟಿಗರಿಗೂ ಸಿಗುವಂತೆ ಮಾಡಿದರು. ಇನ್ನು, ಮಹಿಳಾ ಕ್ರಿಕೆಟ್ ಪಂದ್ಯಗಳಿಗೆ ಉಚಿತ ಟಿಕೆಟ್, ಕಡಿಮೆ ದರದ ಟಿಕೆಟ್ ಮಾಡುವ ಮೂಲಕ ಜನರನ್ನು ಮೈದಾನದತ್ತ ಸೆಳೆಯುವಲ್ಲಿ ಜಯ್ ಶಾ ಪಾತ್ರ ಪ್ರಮುಖವಾದುದು.

ಅಷ್ಟೇ ಅಲ್ಲ ಮಹಿಳಾ ಕ್ರಿಕೆಟಿಗರಿಗೆ ಸಾಕಷ್ಟು ಪಂದ್ಯಗಳೇ ಇರುತ್ತಿರಲಿಲ್ಲ. ಆದರೆ ಈಗ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ದೊಡ್ಡ ತಂಡಗಳ ಜೊತೆ ಉಭಯ ದೇಶಗಳ ಸರಣಿಗಳು ಪದೇ ಪದೇ ನಡೆಯುತ್ತಿರುತ್ತವೆ. ಇದೆಲ್ಲಾ ಕಾರಣಕ್ಕೆ ಮಹಿಳಾ ಕ್ರಿಕೆಟ್ ನಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಈಗ ಮಹಿಳೆಯರ ಪಂದ್ಯವನ್ನೂ ಜನ ಮೈದಾನಕ್ಕೆ ಬಂದು ವೀಕ್ಷಿಸುವುದರ ಜೊತೆಗೆ ಆಪ್ ಗಳಲ್ಲೂ ದಾಖಲೆಯ ಪ್ರಮಾಣದಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೇ ಮಹಿಳಾ ತಾರೆಯರಿಗೆ ಜಯ್ ಶಾ ಮೇಲೆ ಎಲ್ಲಿಲ್ಲದ ಗೌರವವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ