Select Your Language

Notifications

webdunia
webdunia
webdunia
webdunia

ಮುಟ್ಟಾದಾಗ ಮಹಿಳಾ ಕ್ರಿಕೆಟಿಗರು ಏನು ಮಾಡ್ತಾರೆ: ಶಾಕಿಂಗ್ ವಿಚಾರ ಹೇಳಿದ ಜೆಮಿಮಾ ರೊಡ್ರಿಗಸ್

Jemimah Rodrigues

Krishnaveni K

ಮುಂಬೈ , ಮಂಗಳವಾರ, 4 ನವೆಂಬರ್ 2025 (09:31 IST)
Photo Credit: X
ಮುಂಬೈ: ಕ್ರಿಕೆಟ್ ಎನ್ನುವುದು ದೈಹಿಕವಾಗಿ ಹೆಚ್ಚು ತ್ರಾಸ ಕೊಡುವ ಕ್ರೀಡೆ. ಹಾಗಿದ್ದರೆ ಋತುಚಕ್ರದ ದಿನಗಳಲ್ಲಿ ಮುಟ್ಟಿನ ದಿನಗಳಲ್ಲಿ ಮಹಿಳಾ ಕ್ರಿಕೆಟಿಗರು ಹೇಗೆ ಮ್ಯಾನೇಜ್ ಮಾಡ್ತಾರೆ ಎಂಬ ಬಗ್ಗೆ ಮಹಿಳಾ ಕ್ರಿಕೆಟ್ ತಾರೆ ಜೆಮಿಮಾ ರೊಡ್ರಿಗಸ್ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು.

ಪಾಡ್ ಕಾಸ್ಟ್ ಒಂದರಲ್ಲಿ ಜೆಮಿಮಾ ಮಹಿಳೆಯರ ಸಮಸ್ಯೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ಅದೃಷ್ಟವಶಾತ್ ನನಗೆ ಮುಟ್ಟಿನ ಸಮಸ್ಯೆಯದಲ್ಲಿ ಹೊಟ್ಟೆ ನೋವಿನ ಸಮಸ್ಯೆ ಇಲ್ಲ. ಆದರೆ ನನ್ನ ತಾಯಿಗೆ ಈ ಸಮಸ್ಯೆ ಇತ್ತು. ಹೀಗಾಗಿ ಅವಳು ನನಗೆ ಆ ಸಮಸ್ಯೆ ಬಾರದೇ ಇರಲಿ ಎಂದು ಪ್ರಾರ್ಥಿಸುತ್ತಿದ್ದಳು.

ನಾನು ಹಲವರನ್ನು ನೋಡಿದ್ದೇನೆ. ಮುಟ್ಟಿನ ಸಮಯದಲ್ಲಿ ಕೆಲವರು ವಿಪರೀತ ನೋವು ಅನುಭವಿಸುತ್ತಾರೆ. ಮುಟ್ಟಿನ ನೋವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ. ಋತುಚಕ್ರ ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ಹೊಟ್ಟೆ ನೋವು, ಮೂಡ್ ಸ್ವಿಂಗ್ಸ್ ಗೊಳಗಾಗುತ್ತಾರೆ. ಆ ದಿನ ಎದ್ದೇಳುವುದೂ ಬೇಡ ಎನಿಸುತ್ತದೆ. ನನ್ನ ತಂಡದ ಸಹ ಆಟಗಾರರನ್ನು ನೋಡಿದ್ದೇನೆ, ಕೆಲವರಿಗೆ ಎದ್ದು ನಡೆಯಲೂ ಆಗುವುದಿಲ್ಲ. ಅಷ್ಟು ನೋವು, ಸುಸ್ತು ಇರುತ್ತದೆ.

ಒಂದು ವೇಳೆ ಆಡುವುದಿದ್ದರೂ ಮೈದಾನದಲ್ಲಿ ನಿಮ್ಮ ಬಟ್ಟೆ ಕಲೆಯಾದರೆ ಎಂಬ ಭಯ ಕಾಡುತ್ತಿರುತ್ತದೆ. ಬಟ್ಟೆ ಕಲೆಯಾಗಿದ್ದನ್ನು ನೋಡಿ ಯಾರಾದರೂ ತಮಾಷೆ ಮಾಡಿದರೆ ಎಂಬ ಆತಂಕ ಕಾಡುತ್ತದೆ. ಹೀಗಾಗಿ ಆಗಾಗ ಪ್ಯಾಡ್ ಚೇಂಜ್ ಮಾಡಲು ಹೋಗಬೇಕು ಎನಿಸುತ್ತದೆ.

95% ನಾವು ಪಿರಿಯಡ್ಸ್ ಬಂದಾಗ ನೋವಾಗದಂತೆ ಮೆಡಿಸಿನ್ ತೆಗೆದುಕೊಳ್ಳುತ್ತೇವೆ. ಹೆಚ್ಚಿನ ಕ್ರಿಕೆಟಿಗರೂ ಹೀಗೇ ಮಾಡ್ತಾರೆ. ಒಂದು ವೇಳೆ ತೀರಾ ಆಗುತ್ತಿಲ್ಲ ಎಂದರೆ ವಿಶ್ರಾಂತಿ ತೆಗೆದುಕೊಳ್ಳುವುದೂ ಇದೆ’ ಎಂದು ಜೆಮಿಮಾ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರಿಗೊಂದು ಮಹಿಳೆಯರಿಗೊಂದು ನ್ಯಾಯನಾ.. ಬಿಸಿಸಿಐ ಮಾಡಿದ್ದು ಸರಿಯಿಲ್ಲ ಫ್ಯಾನ್ಸ್ ಆಕ್ರೋಶ