ಮುಂಬೈ: ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಖುಷಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಾರೆಯರು ಪ್ರೇಕ್ಷಕರೆಲ್ಲರೂ ಮೈದಾನದಿಂದ ತೆರಳಿದ ಬಳಿಕ ವಿಶಿಷ್ಟ ಹಾಡಿನ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.
ಆಫ್ರಿಕಾವನ್ನು ಸೋಲಿಸಿ ಮೊದಲ ಬಾರಿಗೆ ಮಹಿಳೆಯರು ವಿಶ್ವಕಪ್ ಗೆದ್ದ ಬಳಿಕ ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಪರಸ್ಪರ ಕಣ್ಣೀರು ಹಾಕಿ, ತಬ್ಬಿ, ಮುದ್ದಾಡಿ ಸಂಭ್ರಮಾಚರಣೆ ನಡೆದಿತ್ತು. ಮೈದಾನಕ್ಕೆ ಒಂದು ಸುತ್ತು ಹಾಕಿ ಪ್ರೇಕ್ಷಕರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಪ್ರೇಕ್ಷಕರೆಲ್ಲರೂ ತೆರಳಿದ ಬಳಿಕವೂ ಆಟಗಾರರ ಸೆಲೆಬ್ರೇಷನ್ ಮುಗಿದಿರಲಿಲ್ಲ. ಮಹಿಳಾ ತಾರೆಯರೆಲ್ಲರೂ ಒಂದು ವೃತ್ತಾಕಾರದಲ್ಲಿ ನಿಂತು ತಂಡದ ಥೀಮ್ ಹಾಡೊಂದನ್ನು ಹಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಹಾಡನ್ನು ಬಿಸಿಸಿಐ ಹಂಚಿಕೊಂಡಿದೆ.
ಈ ಹಾಡಿನ ಸೃಷ್ಟಿಕರ್ತೆ ಜೆಮಿಮಾ ರೊಡ್ರಿಗಸ್ ಎನ್ನಲಾಗಿದೆ. ಮುಂದೊಂದು ದಿನ ಕಪ್ ಗೆದ್ದರೆ ಈ ಹಾಡನ್ನು ಹಾಡಬೇಕು ಎಂದು ನಾಲ್ಕು ವರ್ಷಗಳಿಂದ ತಯಾರಿ ಮಾಡಿದ್ದರಂತೆ. ಅದನ್ನು ಈಗ ಕೊನೆಗೂ ಜೊತೆಗೇ ಹಾಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.