ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳೆಯರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂದು ಸೋಲುತ್ತೋ ಬಿಡುತ್ತೋ ಆದರೆ ಜೆಮಿಮಾ ರೊಡ್ರಿಗಸ್ ಮಾತ್ರ ಅಭಿಮಾನಿಗಳ ಕಣ್ಣಲ್ಲಿ ಹೀರೋ ಆದರು. 
									
			
			 
 			
 
 			
					
			        							
								
																	ಇಂದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಎಂದಿನಂತೆ ಅಬ್ಬರಿಸಿ 338 ರನ್ ಗಳ ಬೃಹತ್ ಮೊತ್ತ ಪೇರಿಸಿದೆ. ಈ ಮೊತ್ತ ಬೆನ್ನತ್ತಲಾಗದೇ ಭಾರತ ಸುಲಭವಾಗಿ ಸೋಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತ.
									
										
								
																	ಆದರೆ ಈಗ ಭಾರತದ ಬ್ಯಾಟಿಂಗ್ ನೋಡಿದರೆ ವೀಕ್ಷಕರು ಕುತೂಹಲದಿಂದ ಪಂದ್ಯ ಏನಾಗುತ್ತದೋ ಎಂದು ನೋಡುವಂತಾಗಿದೆ. ಇದಕ್ಕೆಲ್ಲಾ ಕಾರಣ ಜೆಮಿಮಾ ರೊಡ್ರಿಗಸ್ ಬ್ಯಾಟಿಂಗ್. ಎಲ್ಲರೂ ಇಂದು ಸ್ಮೃತಿ ಮಂಧಾನ ಆಡಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಔಟ್ ಆಫ್ ಸಿಲಬಸ್ ನಂತೆ ಬಂದ ಜೆಮಿಮಾ ಇದೀಗ 83 ಎಸೆತಗಳಿಂದ 80 ರನ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ನಾಯಕಿ ಹರ್ಮನ್ ಪ್ರೀತ್ ಕೌರ್ 59 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
									
											
							                     
							
							
			        							
								
																	ವಿಶೇಷವೆಂದರೆ ಭಾರತ ಈಗ ಕೇವಲ 2 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿದೆ. ಇನ್ನೂ 20 ಓವರ್ ಗಳ ಪಂದ್ಯ ಬಾಕಿಯಿದೆ. ಗೆಲ್ಲಲು ಇನ್ನೂ 142 ರನ್ ಗಳಿಸಬೇಕಿದೆ. ಜೆಮಿಮಾ ಮತ್ತು ಹರ್ಮನ್ ಇದುವರೆಗೆ ಮುರಿಯದ ಮೂರನೇ ವಿಕೆಟ್ ಗೆ 138 ರನ್ ಗಳಿಸಿದ್ದಾರೆ.