Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಬಗ್ಗೆ ಬಂದ ರೂಮರ್ ಗಳಿಗೆ ಮುಂಬೈ ಇಂಡಿಯನ್ಸ್ ಮಹತ್ವದ ಹೇಳಿಕೆ

Rohit Sharma

Krishnaveni K

ಮುಂಬೈ , ಗುರುವಾರ, 30 ಅಕ್ಟೋಬರ್ 2025 (18:00 IST)
Photo Credit: Instagram
ಮುಂಬೈ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಮುಂದಿನ ಐಪಿಎಲ್ ಗೆ ಮುಂಬೈ ತೊರೆದು ಕೆಕೆಆರ್ ತಂಡ ಸೇರಿಕೊಳ್ಳಲಿದ್ದಾರೆ ಎಂಬ ವದಂತಿಗಳ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ ನೀಡಿದೆ.

ಇತ್ತೀಚೆಗಿನ ದಿನಗಳಲ್ಲಿ ರೋಹಿತ್ ಶರ್ಮಾ, ತಮ್ಮ ಗೆಳೆಯ ಹಾಗೂ ಕೆಕೆಆರ್ ಕೋಚ್ ಅಭಿಷೇಕ್ ನಾಯರ್ ಜೊತೆ ಪ್ರಾಕ್ಟೀಸ್ ಮಾಡುತ್ತಿರುತ್ತಾರೆ. ವಿಶೇಷವಾಗಿ ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ಮೊದಲು ತೂಕ ಇಳಿಕೆಗೆ ಮತ್ತು ಬ್ಯಾಟಿಂಗ್ ಅಭ್ಯಾಸಕ್ಕೆ ಅಭಿಷೇಕ್ ನಾಯರ್ ಸಹಾಯ ಮಾಡಿದ್ದರು.

ಇದರ ಪರಿಣಾಮ ರೋಹಿತ್ ಆಸ್ಟ್ರೇಲಿಯಾ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇದರ ನಡುವೆಯೇ ರೋಹಿತ್ ಮುಂಬೈ ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿಕೊಳ್ಳಲಿದ್ದಾರೆ ಎಂಬ ರೂಮರ್ ಹಬ್ಬಿತ್ತು.

ಈ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ ನೀಡಿದ್ದು ರೋಹಿತ್ ಎಲ್ಲಿಗೂ ಹೋಗುವ ಪ್ರಶ್ನೆಯೇ ಇಲ್ಲ ಎಂದಿದೆ. ಶಾರುಖ್ ಖಾನ್ ಅವರ ಡಾನ್ ಸಿನಿಮಾದ ಡೈಲಾಗ್ ಶೈಲಿಯಲ್ಲಿ ಮುಂಬೈ ಎಲ್ಲಾ ರೂಮರ್ ಗಳಿಗೆ ತೆರೆ ಎಳೆದಿದೆ. ‘ಸೂರ್ಯ ನಾಳೆ ಹುಟ್ಟುವುದು ಖಚಿತ. ಆದರೆ ನೈಟ್ ಕಷ್ಟ ಸಾಧ್ಯ ಮಾತ್ರವಲ್ಲ, ಅಸಾಧ್ಯ’ ಎಂದು ಸಂದೇಶದ ಜೊತೆಗೆ ರೋಹಿತ್ ಶರ್ಮಾ ಫೋಟೋ ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

INDW vs AUSW: ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತ ವನಿತೆಯರಿಗೆ ಸಂಕಷ್ಟ