Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವಾಗ ಇಲ್ಲಿದೆ ಡೀಟೈಲ್ಸ್

Rohit Sharma, Virat Kohli

Krishnaveni K

ಮುಂಬೈ , ಸೋಮವಾರ, 27 ಅಕ್ಟೋಬರ್ 2025 (10:51 IST)
Photo Credit: X
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಆಡುವುದನ್ನು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದು ಆಗಿದೆ. ಇನ್ನು ಈ ರೋ ಕೊ ಜೋಡಿ ಆಡುವುದನ್ನು ನೋಡಲು ಎಷ್ಟು ದಿನ ಕಾಯಬೇಕು ಇಲ್ಲಿದೆ ವಿವರ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಮಾದರಿಗೆ ನಿವೃತ್ತಿ ಹೇಳಿದ್ದು, ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಬಹಳ ದಿನಗಳ ನಂತರ ಆಸ್ಟ್ರೇಲಿಯಾ ಸರಣಿಯಲ್ಲಿ ಇಬ್ಬರೂ ಆಡಿದ್ದರು. ಈ ಪೈಕಿ ರೋಹಿತ್ ಎರಡು ಅರ್ಧಶತಕ ಗಳಿಸಿ ಮಿಂಚಿದ್ದರು.

ಇನ್ನೀಗ  ಈ ದಿಗ್ಗಜರ ಆಟವನ್ನು ನೋಡಲು ಒಂದು ತಿಂಗಳು ಕಾಯಬೇಕಿದೆ. ಯಾಕೆಂದರೆ ಭಾರತಕ್ಕೆ ಮುಂದಿನ ಏಕದಿನ ಸರಣಿ ಇರುವುದು ದಕ್ಷಿಣ ಆಫ್ರಿಕಾ ಜೊತೆ. ಇದು ಇನ್ನೂ ಒಂದು ತಿಂಗಳ ಬಳಿಕ. ಅಂದರೆ ನವಂಬರ್ 30 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಈ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಆಡುವುದನ್ನು ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗಲಿದೆ. ವಿಶೇಷವೆಂದರೆ ಇದು ತವರಿನಲ್ಲಿ ನಡೆಯುವ ಸರಣಿಯಾಗಿದೆ. ಹೀಗಾಗಿ ಈ ಸರಣಿಗೆ ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಮತ್ತೆ ಶುರು ಹರ್ಷಿತ್ ರಾಣಾ ತಲೆನೋವು