ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ಫನ್ನಿ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ರೋಹಿತ್ ಶರ್ಮಾರ ಈ ಜಾಗಕ್ಕೆ ಬ್ಯಾಟ್ ಇಡುವ ಧೈರ್ಯ ಕೊಹ್ಲಿಗೆ ಮಾತ್ರ ಎಂದಿದ್ದಾರೆ.
ಇಂದು ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಯಾಟ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತ್ತು. 69 ರನ್ ಗಳಾಗಿದ್ದಾಗ ನಾಯಕ ಶುಭಮನ್ ಗಿಲ್ ವಿಕೆಟ್ ಬಿದ್ದ ಬಳಿಕ ಜೊತೆಯಾದ ಈ ಜೋಡಿ ಶತಕದ ಜೊತೆಯಟವಾಡಿತು.
ರೋಹಿತ್ ಶರ್ಮಾ ಶತಕ ಸಿಡಿಸಿದರೆ ವಿರಾಟ್ ಅರ್ಧಶತಕ ಸಿಡಿಸಿ ಆಡುತ್ತಿದ್ದಾರೆ. ಮೊದಲು ಅರ್ಧಶತಕ ಸಿಡಿಸಿದವರು ರೋಹಿತ್. ಆಗ ಇನ್ನೊಂದು ತುದಿಯಲ್ಲಿದ್ದ ವಿರಾಟ್ ರೋಹಿತ್ ಗೆ ಬ್ಯಾಟ್ ನಿಂದಲೇ ಬೆನ್ನು ತಟ್ಟಿದ್ದಾರೆ.
ರೋಹಿತ್ ಹಿಂಭಾಗಕ್ಕೇ ಸರಿಯಾಗಿ ಬ್ಯಾಟ್ ನಿಂದ ತಟ್ಟಿ ಕೊಹ್ಲಿ ಅಭಿನಂದಿಸಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೋಹಿತ್ ರ ಈ ಭಾಗಕ್ಕೇ ಬ್ಯಾಟ್ ಇಡುವ ಧೈರ್ಯ ಇರೋದು ಕೊಹ್ಲಿಗೆ ಮಾತ್ರ ಎಂದು ಫ್ಯಾನ್ಸ್ ಕಿಚಾಯಿಸಿದ್ದಾರೆ.