Publish Date: Sat, 25 Oct 2025 (15:19 IST)
Updated Date: Sat, 25 Oct 2025 (15:25 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಗಳಿಸಿದ್ದು, ಇದರೊಂದಿಗೆ ನಮ್ಮ ಕತೆ ಇನ್ನೂ ಮುಗಿದಿಲ್ಲ ಎಂದು ಟೀಕಾಕಾರರಿಗೆ ಸಾರಿ ಹೇಳಿದಂತಿತ್ತು.
ನಾಯಕತ್ವ ಕೈ ತಪ್ಪಿದಾಗ ರೋಹಿತ್ ಶರ್ಮಾ ಕತೆ ಇನ್ನು ಮುಗಿಯಿತು. ಈ ಸರಣಿಯೇ ಅವರ ಪಾಲಿಗೆ ಕೊನೆಯಾಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸುವಂತೆ ರೋಹಿತ್ ಈ ಸರಣಿಯಲ್ಲಿ ಆಡಿದ್ದಾರೆ.
ಕೇವಲ ಆಟಗಾರನಾಗಿ ತಂಡದಲ್ಲಿದ್ದರೆ ಎದುರಾಳಿಗಳಿಗೆ ತಾನೆಷ್ಟು ಡೇಂಜರ್ ಎಂದು ಸಾರಿದ್ದಾರೆ. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ರೋಹಿತ್ ಈ ಪಂದ್ಯದಲ್ಲಿ ಶತಕವನ್ನೇ ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದರು.
ಒಟ್ಟು 105 ಎಸೆತ ಎದುರಿಸಿದ ರೋಹಿತ್ 100 ರನ್ ಗಳಿಸಿ ಈಗಲೂ ಅಜೇಯರಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ವಿರಾಟ್ ಕೊಹ್ಲಿ ಕೂಡಾ 59 ರನ್ ಗಳಿಸಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಭಾರತ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ ರನ್ ಗಳಿಸಿದ್ದು ಗೆಲುವಿಗೆ ಇನ್ನೂ 37 ರನ್ ಗಳಿಸಬೇಕಿದೆ.