ಮುಂಬೈ: ರೋಹಿತ್ ಶರ್ಮಾ ಈಗ ವಿಶ್ವ ನಂ.1 ಬ್ಯಾಟರ್. ತಂಡದಿಂದಲೇ ಕಿತ್ತು ಹಾಕಬೇಕು, ವಯಸ್ಸಾಯ್ತು ಎಂದವರಿಗೆ ಇದು ಎಂಥಾ ತಿರುಗೇಟು ಕೊಟ್ಟಿದ್ದಾರೆ ಹಿಟ್ ಮ್ಯಾನ್.
									
			
			 
 			
 
 			
					
			        							
								
																	ಐಸಿಸಿ ಲೇಟೆಸ್ಟ್ ಏಕದಿನ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿ ಪ್ರಕಟಿಸಿದ್ದು ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ನಂ.1 ಬ್ಯಾಟರ್ ಆಗಿ  ಹೊರಹೊಮ್ಮಿದ್ದಾರೆ.  ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿ ಶುಭಮನ್ ಗಿಲ್ ಗೆ ಟೀಂ ಇಂಡಿಯಾ ಏಕದಿನ ನಾಯಕತ್ವ ನೀಡಲಾಗಿತ್ತು. ವಿಶೇಷವೆಂದರೆ ಈಗ ಅದೇ ಶುಭಮನ್ ಗಿಲ್ ರನ್ನು ಹಿಂದಿಕ್ಕಿ ರೋಹಿತ್ ಏಕದಿನ ನಂ.1 ಬ್ಯಾಟರ್ ಎನಿಸಿಕೊಂಡಿದ್ದಾರೆ.
									
										
								
																	ರೋಹಿತ್ ಅಭಿಮಾನಿಗಳಂತೂ ಈಗ ದೀಪಾವಳಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. 38 ವರ್ಷದ ರೋಹಿತ್ ರನ್ನು ನಾಯಕತ್ವದಿಂದ ಮಾತ್ರವಲ್ಲ ನಿವೃತ್ತಿಗೆ ಸೂಚಿಸಿ ತಂಡದಿಂದಲೇ ಕಿತ್ತು ಹಾಕಲು ಒತ್ತಡಗಳಿತ್ತು. ಆದರೆ ಇದರ ನಡುವೆಯೇ ರೋಹಿತ್ ಆಸ್ಟ್ರೇಲಿಯಾ ಸರಣಿಗಾಗಿ ತಯಾರಿ ನಡೆಸಿದ್ದರು.
									
											
							                     
							
							
			        							
								
																	ಇದಕ್ಕಾಗಿ ಅವರು ತೂಕ ಇಳಿಸಿಕೊಂಡಿದ್ದರು. ಆಸ್ಟ್ರೇಲಿಯಾ ಸರಣಿಯಲ್ಲಿ ಒಂದು ಅರ್ಧಶತಕ, ಒಂದು ಶತಕದೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ರೋಹಿತ್ ರ ಈ ಸಾಧನೆಗೆ ಈಗ ನಂ.1 ಬ್ಯಾಟರ್ ಎಂಬ ಕಿರೀಟ ಸಿಕ್ಕಿದೆ. ಒಟ್ಟು 781 ಅಂಕ ಪಡೆದ ರೋಹಿತ್ ನಂ.1 ಬ್ಯಾಟರ್ ಆಗಿದ್ದರೆ 764 ಅಂಕ ಪಡೆದಿರುವ ಇಬ್ರಾಹಿಂ ಜರ್ದಾನ್ ಎರಡನೇ ಸ್ಥಾನದಲ್ಲಿ, 745 ಅಂಕ ಪಡೆದಿರುವ ಶುಭಮನ್ ಗಿಲ್ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಭಾರತದವರೇ ಮತ್ತೊಬ್ಬ ಬ್ಯಾಟರ್ ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.