ಮುಂಬೈ: ಮಹಿಳೆಯ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂದು ಭಾರತದ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಮಳೆಯ ಭೀತಿಯೂ ಇರುವುದರಿಂದ ಟಾಸ್ ಗೆಲ್ಲುವುದು ಪ್ರಮುಖವಾಗಿತ್ತು. ಆದರೆ ಭಾರತ ಟಾಸ್ ಸೋತಿದೆ. ಇದು ಆರಂಭದಲ್ಲೇ ಸಂಷಕ್ಟ ಎದುರಾದಂತಾಗಿದೆ. ಮೊದಲು ಬ್ಯಾಟಿಂಗ್ ಆಯ್ದುಕೊಂಡ ತಂಡಕ್ಕೆ ಹೆಚ್ಚು ಲಾಭವಾಗಲಿದೆ. ಈ ಕಾರಣಕ್ಕೆ ಆಸ್ಟ್ರೇಲಿಯಾ ಮಹತ್ವದ ಟಾಸ್ ಗೆದ್ದಿದೆ ಎನ್ನಬಹುದು.
ಇನ್ನು, ಭಾರತ ತಂಡ ಈ ಪಂದ್ಯಕ್ಕೆ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಪ್ರತೀಕಾ ರಾವ್ ಗಾಯಗೊಂಡಿರುವ ಹಿನ್ನಲೆಯಲ್ಲಿ ಶಫಾಲಿ ವರ್ಮ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಉಮಾ ಮತ್ತು ಹರ್ಲಿನ್ ಡಿಯೋಲ್ ಗೆ ವಿಶ್ರಾಂತಿ ನೀಡಲಾಗಿದ್ದು, ರಿಚಾ ಘೋಷ್, ಕ್ರಾಂತಿ ಗೌಡ್ ಕಮ್ ಬ್ಯಾಕ್ ಮಾಡಿದ್ದಾರೆ.
ಭಾರತ ತಂಡ ಇಂತಿದೆ: ಸ್ಮೃತಿ ಮಂಧಾನ, ಶಫಾಲಿ ವರ್ಮ, ಅಮನ್ಜೋತ್ ಕೌರ್, ಜೆಮಿಮಾ ರೊಡ್ರಿಗಸ್, ಹರ್ಮನ್ ಪ್ರೀತ್ ಕೌರ್ (ನಾಯಕ), ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್.