Select Your Language

Notifications

webdunia
webdunia
webdunia
webdunia

INDW vs AUSW: ಭಾರತ ಮಹಿಳೆಯರಿಗೆ ಮತ್ತೆ ಸೋಲು, ವಿಶ್ವಕಪ್ ಗೆಲ್ಲೋ ಕನಸು ನನಸಾಗಲು ಸಾಧ್ಯನಾ

Harmanpreet Kaur

Krishnaveni K

ಮುಂಬೈ , ಸೋಮವಾರ, 13 ಅಕ್ಟೋಬರ್ 2025 (09:27 IST)
Photo Credit: X
ಮುಂಬೈ: ಮಹಿಳೆಯರ ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲೆಯ ಮೊತ್ತ ಗಳಿಸಿಯೂ ಭಾರತ ಮಹಿಳೆಯರು ಸೋತು ಹೋದರು. ಈ ಸೋಲಿನ ಬಳಿಕ ಹಿಂಗಾದ್ರ ವಿಶ್ವಕಪ್ ಗೆಲ್ಲುವುದು ನನಸಾಗಲು ಸಾಧ್ಯನಾ ಎಂದು ಪ್ರಶ್ನೆ ಮೂಡಿದೆ.

ಈ ಬಾರಿ ತವರಿನಲ್ಲಿ ವಿಶ್ವಕಪ್ ಪಂದ್ಯ ನಡೆಯುತ್ತಿರುವುದರಿಂದ ಭಾರತ ಗೆಲ್ಲಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಇದಕ್ಕೆ ತಕ್ಕಂತೆ ಇದಕ್ಕೆ ಮೊದಲು ನಡೆದ ಎರಡು ಏಕದಿನ ಸರಣಿಗಳಲ್ಲಿ ಭಾರತ ಬಲಿಷ್ಠ ತಂಡಗಳ ಎದುರೇ ಗೆದ್ದಿತ್ತು.

ಈ ವಿಶ್ವಕಪ್ ನಲ್ಲೂ ಮೊದಲ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿತ್ತು. ಆದರೆ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಹಂತದಲ್ಲಿ ಸೋತಿತ್ತು. ನಿನ್ನೆ ಆಸ್ಟ್ರೇಲಿಯಾ ವಿರುದ್ಧವೂ ಯಥಾ ಪ್ರಕಾರ ಕೊನೆಯ ಹಂತದಲ್ಲಿ ಮುಗ್ಗರಿಸಿತು.

ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಲು ಭಾರತದಿಂದ ಸಾಧ್ಯವಾಗದೇ ಹೋದಲ್ಲಿ ಈ ವಿಶ್ವಕಪ್ ಗೆಲ್ಲುವುದು ಕನಸಾಗಿಯೇ ಉಳಿಯಲಿದೆ. ಭಾರತಕ್ಕೆ ಮುಖ್ಯವಾಗಿ ಬೌಲರ್ ಗಳ ಹುಳುಕಿನಿಂದಲೇ ಕಳೆದ ಎರಡು ಪಂದ್ಯಗಳಲ್ಲಿ ಸೋಲಾಗಿತ್ತು. ಈ ತಪ್ಪು ಸರಿಪಡಿಸದೇ ಇದ್ದರೆ ವಿಶ್ವಕಪ್ ಗೆಲ್ಲುವುದು ಕನಸಾಗಿಯೇ ಉಳಿಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ಫ್ಯಾನ್ಸ್ ಗೂ ಶಾಕ್ ಕೊಡಲು ಮುಂದಾಗಿರುವ ವಿರಾಟ್ ಕೊಹ್ಲಿ