ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಧಾನವಾಗಿ ಮರೆಯಾಗುತ್ತಿರುವ ಕಿಂಗ್ ಕೊಹ್ಲಿ ಈಗ ಐಪಿಎಲ್ ಅಭಿಮಾನಿಗಳಿಗೂ ಶಾಕ್ ಕೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ವಿರಾಟ್ ಕೊಹ್ಲಿ ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆರ್ ಸಿಬಿ ಎಂದರೇ ವಿರಾಟ್ ಕೊಹ್ಲಿ ಎಂಬಂತಿತ್ತು. ಆದರೆ ಈಗ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರೆ ಐಪಿಎಲ್ ಗೂ ವಿದಾಯ ಹೇಳಲು ಕೊಹ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಕಾರಣವೂ ಇದೆ. ಆರ್ ಸಿಬಿಗೆ ಸಂಬಂಧಿಸಿದ ಹೊಸ ಕಮರ್ಷಿಯಲ್ ಡೀಲ್ ಗಳನ್ನು ಕೊಹ್ಲಿ ನಿರಾಕರಿಸಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ಅವರು ಏಕದಿನ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಬಳಿಕ ಐಪಿಎಲ್ ಗೂ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೊಮ್ಮೆ ಕೊಹ್ಲಿ ಒಮ್ಮೆ ನಾನು ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರೆ ಮತ್ತೆ ಬ್ಯಾಟ್ ಕೂಡಾ ಎತ್ತಲ್ಲ ಎಂದಿದ್ದರು. ಇದೀಗ ಸಂಪೂರ್ಣವಾಗಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಲಂಡನ್ ನಲ್ಲಿಯೇ ಸೆಟಲ್ ಆಗಲು ಕೊಹ್ಲಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಆರ್ ಸಿಬಿ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗಲಿದೆ.