ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ 2 ಸ್ಲಾಗರ್ಸ್ ಪಾಡ್ ಕಾಸ್ಟ್ ನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾಡ್ ಕಾಸ್ಟ್ ನಲ್ಲಿ ಸು ಫ್ರಮ್ ಸೊ ಸಿನಿಮಾ ನೋಡಿರುವುದಾಗಿ ಹೇಳಿದ್ದಾರೆ. ಆದರೆ ರಾಜ್ ಬಿ ಶೆಟ್ಟಿಯವರ ಗರುಡ ಗಮನ ವೃಷಭ ವಾಹನ ಸಿನಿಮಾ ಗೊತ್ತಿಲ್ಲ ಎಂದಿದ್ದಾರೆ.
ಕೆಎಲ್ ರಾಹುಲ್ ಈ ಪಾಡ್ ಕಾಸ್ಟ್ ನಲ್ಲಿ ಸಿನಿಮಾ ಬಗ್ಗೆ ತಮ್ಮ ಇಷ್ಟಗಳನ್ನು ಹಂಚಿಕೊಂಡಿದ್ದಾರೆ. ಈ ಪಾಡ್ ಕಾಸ್ಟ್ ನಲ್ಲಿ ಕಾಂತಾರ ಸ್ಟೈಲ್ ಸೆಲೆಬ್ರೇಷನ್ ಬಗ್ಗೆ ಹೇಳಿಕೊಂಡಿರುವ ರಾಹುಲ್ ಬಿಡುಗಡೆಯಾದ ಒಂದೇ ವಾರದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾವನ್ನೂ ಎರಡು ಬಾರಿ ನೋಡಿರುವುದಾಗಿ ಹೇಳಿದ್ದಾರೆ. ಇನ್ನು ತಮ್ಮ ಮೊಬೈಲ್ ನ ಪ್ಲೇ ಲಿಸ್ಟ್ ನಲ್ಲಿ ಟಾಪ್ 3 ಹಾಡು ಕಾಂತಾರ ಸಿನಿಮಾದ್ದು ಎಂದಿದ್ದಾರೆ.
ರಾಜ್ ಬಿ ಶೆಟ್ಟಿಯವರ ಗರುಡ ಗಮನ ವೃಷಭ ವಾಹನ ಬಗ್ಗೆ ಸಂದರ್ಶಕರು ಕೇಳಿದಾಗ ನನಗೆ ಗೊತ್ತಿಲ್ಲ ಈ ಸಿನಿಮಾ ಎಂದಿದ್ದಾರೆ. ಇವರದ್ದೇ ಇತ್ತೀಚೆಗೆ ಜಿಯೋ ಹಾಟ್ ಸ್ಟಾರ್ ನಲ್ಲಿ ಒಂದು ಸಿನಿಮಾ ನೋಡಿದ್ದೇನೆ ಎಂದು ಸು ಫ್ರಮ್ ಸೊ ಸಿನಿಮಾ ಬಗ್ಗೆ ಹೇಳಿದ್ದಾರೆ. ಆಗ ಸಂದರ್ಶಕರು ಗರುಡ ಗಮನ ತಪ್ಪದೇ ನೋಡಿ. ತುಂಬಾ ಚೆನ್ನಾಗಿದೆ. ಎಲ್ಲವೂ ನಿಮ್ಮ ಮಂಗಳೂರಿನಲ್ಲೇ ಶೂಟಿಂಗ್ ಮಾಡಿರುವ ಗ್ಯಾಂಗ್ ಸ್ಟರ್ ಸಿನಿಮಾ. ಮಂಗಳೂರು ದಸರಾ ಎಲ್ಲಾ ತೋರಿಸಿದ್ದಾರೆ ಎಂದಿದ್ದಾರೆ. ಅದಕ್ಕೆ ರಾಹುಲ್ ಹೌದಾ, ಖಂಡಿತಾ ನೋಡುತ್ತೇನೆ ಎಂದಿದ್ದಾರೆ.