ಬೆಂಗಳೂರು: ಅಣ್ಣ ಡಿಕೆ ಶಿವಕುಮಾರ್ ಕೂಡಾ ಸಿಎಂ ಆಗಬೇಕು ಎಂಬುದು ನನ್ನಾಸೆ. ಅದೃಷ್ಟ ಕೈ ಹಿಡಿದರೆ ಖಂಡಿತಾ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಡಿಕೆ ಸುರೇಶ್ ತಮ್ಮ ಅಣ್ಣ ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವಂಬರ್ ಕ್ರಾಂತಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ನನಗೆ ಇದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
ಅಧಿಕಾರ ಹಂಚಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನೀವು ಈ ಬಗ್ಗೆ ಹೈಕಮಾಂಡ್ ನಾಯಕರು, ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳನ್ನೇ ಕೇಳಬೇಕು. ನನ್ನ ಅಣ್ಣನ ಹಣೆಯಲ್ಲಿ ಸಿಎಂ ಆಗುವ ಯೋಗ ಬರೆದಿದ್ದರೆ ಆಗುತ್ತಾರೆ. ಅವರನ್ನ ಮುಖ್ಯಮಂತ್ರಿಯಾಗಿ ನೋಡುವ ಭಾಗ್ಯ ನನಗೂ ಇದೆ ಎಂದಿದ್ದಾರೆ.
ಹಾಗಂತ ಮುಖ್ಯಮಂತ್ರಿಯಾಗುವುದಕ್ಕೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ ನಾವು ಮುಂದಿನ ಚುನಾವಣೆಗೂ ಹೋಗುತ್ತೇವೆ. ಸಿಎಂ ಆಗುವ ಬಗ್ಗೆ ಎಲ್ಲಾ ನಾಯಕರೂ ಅವರವರ ಅಭಿಪ್ರಾಯವನ್ನು ಹೈಕಮಾಂಡ್ ಗೆ ಹೇಳಿದ್ದಾರೆ. ಆ ಹಕ್ಕು ಅವರಿಗಿದೆ ಎಂದಿದ್ದಾರೆ.