Select Your Language

Notifications

webdunia
webdunia
webdunia
webdunia

ಮುಂದಿನ ವಿಧಾನಸಭೆ ಚುನಾವಣೆಗೆ ಸಿಎಂ ನಿಲ್ಲಲ್ಲ ಅಂದ್ರು ನಾವು ಒಪ್ಪಲ್ಲ: ಸಂತೋಷ್ ಲಾಡ್

CM Siddaramaiah

Sampriya

ಬೆಂಗಳೂರು , ಬುಧವಾರ, 29 ಅಕ್ಟೋಬರ್ 2025 (16:52 IST)
Photo Credit X
ಬೆಂಗಳೂರು: ರಾಜ್ಯ ಸಿಎಂ ಕುರ್ಚಿ ಬದಲಾವಣೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಹುಲ್ ಗಾಂಧಿಯಂತೆ ಸಿಎಂ ಸಿದ್ದರಾಮಯ್ಯ ಕೂಡಾ ಕಾಂಗ್ರೆಸ್‌ಗೆ ಅನಿವಾರ್ಯತೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.  

ಸಿದ್ದರಾಮಯ್ಯ ನಾಯಕತ್ವ ಅನಿವಾರ್ಯತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು. ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಸಕ್ರಿಯವಾಗಿರಬೇಕು. ಅವರು ರಾಜ್ಯಕಾರಣದಿಂದ ನಿವೃತ್ತಿಯಾಗಬಾರದೆಂದು ಹೇಳುವ ಮೂಲಕ ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದರು. 

ರಾಜ್ಯ ರಾಜಕಾರಣದಲ್ಲಿ ಬೇಕಾಗಿರುವ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲಲ್ಲ ಎಂದು ಹೇಳಿದ್ರೂ ನಾವು ಒಪ್ಪಲ್ಲ. ರಾಜಕಾರಣದಿಂದ ಅವರು ಹೊರಗೆ ಉಳಿಯಬಾರದು ಅನ್ನೋದು ನನ್ನ ವಾದ ಎಂದರು.

ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ಅನಿವಾರ್ಯತೆ ಅಲ್ವಾ? ಅದೇ ರೀತಿ ಸಿದ್ದರಾಮಯ್ಯ ಅನಿವಾರ್ಯತೆ ಇದೆ. ಸಿದ್ದರಾಮಯ್ಯ ಪಾಪ್ಯುಲರ್ ನಾಯಕ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಮುಖ ಇದ್ದಂತೆ. ಖಂಡಿತವಾಗಿಯೂ ಅವರ ಅಗತ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಲವು ಬಾರಿ ಅರೆಸ್ಟ್ ಆದರೂ ಬದಲಾಯಿಸದ ಹಳೆ ಚಾಳಿ, ಭೂಗತ ಪಾತಕಿ ದಾವೂದ್ ಸಹಚರ ಅರೆಸ್ಟ್‌