ಬೆಂಗಳೂರು: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ. ಈ ಗುಟ್ಟು ಹೈಕಮಾಂಡ್ ಗೂ ಗೊತ್ತು. ಹೀಗಾಗಿಯೇ ಹೈಕಮಾಂಡ್ ಸೈಲೆಂಟ್ ಆಗಿದೆ.
ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಬಹುದು ಎಂಬ ಸುದ್ದಿ ಬರುತ್ತಿದ್ದ ಬೆನ್ನಲ್ಲೇ ಇನ್ನೊಂದೆಡೆ ದಲಿತ ನಾಯಕರು ತಮ್ಮ ಸಮುದಾಯದವರಿಗೆ ಮುಖ್ಯಮಂತ್ರಿ ಪಟ್ಟ ಸಿಗಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ. ಈಗಾಗಲೇ ದಲಿತ ನಾಯಕರು ಸಭೆ ನಡೆಸಿ ದಲಿತ ಸಿಎಂ ಬೇಡಿಕೆ ಸಲ್ಲಿಸಿದ್ದಾರೆ. ಇನ್ನೊಂದೆಡೆ ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ಇಷ್ಟೆಲ್ಲಾ ನಿಷ್ಠೆಯಿಂದ ದುಡಿದಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎನ್ನುತ್ತಿದ್ದಾರೆ.
ಹೀಗಾಗಿ ಈಗ ಹೈಕಮಾಂಡ್ ಗೆ ದೊಡ್ಡ ತಲೆನೋವು ಶುರುವಾಗಿದೆ. ಒಂದು ವೇಳೆ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಡಿಕೆಶಿಗೆ ಪಟ್ಟ ಕಟ್ಟಿದರೆ ದಲಿತ ನಾಯಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯನವರೇ ಮುಂದುವರಿಯುವುದಕ್ಕೆ ದಲಿತ ನಾಯಕರಿಂದಲೂ ಈಗ ವಿರೋಧ ಇಲ್ಲ. ಇದು ಸಿದ್ದರಾಮಯ್ಯಗೆ ಪ್ಲಸ್ ಪಾಯಿಂಟ್.
ಈ ಗುಟ್ಟು ಗೊತ್ತಿರುವ ಕಾರಣಕ್ಕೇ ಹೈಕಮಾಂಡ್ ಕೂಡಾ ಸೈಲೆಂಟ್ ಆಗಿದೆ. ಬಿಹಾರ ಚುನಾವಣೆ ಮುಗಿದ ಬಳಿಕವೂ ಸಿಎಂ ಬದಲಾವಣೆ ಎನ್ನುವ ಜೇನುಗೂಡಿಗೆ ಕೈ ಹಾಕುವ ಕೆಲಸ ಮಾಡುವ ಸಾಧ್ಯತೆಯಿಲ್ಲ.