ಕ್ಯಾನ್ ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿ ಮಾಡಿದ್ದರಿಂದ ಅನಿವಾರ್ಯವಾಗಿ ರದ್ದುಗೊಳಿಸಬೇಕಾಯಿತು. 
									
			
			 
 			
 
 			
					
			        							
								
																	ಇಂದು ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಭಾರತ ಆರಂಭದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡರೂ ನಂತರ ಶುಭಮನ್ ಗಿಲ್-ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟವಾಡುತ್ತಿದ್ದರು.
									
										
								
																	45 ರನ್ ಗೆ 1 ವಿಕೆಟ್ ಕಳೆದುಕೊಂಡಿದ್ದಾಗ ಒಮ್ಮೆ ಮಳೆಯಿಂದಾಗಿ ಪಂದ್ಯ ಸ್ಥಗಿತವಾಯಿತು. ನಂತರ ಮಳೆ ನಿಂತ ಬಳಿಕ ಪಂದ್ಯ ನಾಲ್ಕು ಓವರ್ ಕಡಿತಗೊಳಿಸಿ ಪಂದ್ಯ ಪುನರಾರಂಭ ಮಾಡಲಾಯಿತು. ಆದರೆ 10 ನೇ ಓವರ್ ನಡೆಯುತ್ತಿದ್ದಾಗ ಮತ್ತೆ ಮಳೆಯ ಅಬ್ಬರ ಹೆಚ್ಚಾಯ್ತು. ಈ ವೇಳೆ ಭಾರತ 9.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತ್ತು.
									
											
							                     
							
							
			        							
								
																	ಆಗ ಸುರಿದ ಮಳೆ ಬಿಡುವ ಲಕ್ಷಣವೇ ತೋರಲಿಲ್ಲ. ಕೊನೆಗೆ ಅನಿವಾರ್ಯವಾಗಿ ಪಂದ್ಯ ರದ್ದುಗೊಳಿಸಬೇಕಾಯಿತು. ಸೂರ್ಯಕುಮಾರ್ ಯಾದವ್ 25, ಶುಭಮನ್ ಗಿಲ್ 35 ರನ್ ಗಳಿಸಿದ್ದರು. ಅಭಿಷೇಕ್ ಶರ್ಮಾ 19 ರನ್ ಗಳಿಗೆ ನಥನ್ ಎಲಿಸ್ ಗೆ ವಿಕೆಟ್ ಒಪ್ಪಿಸಿದ್ದರು. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಹೀಗೆ ಮಳೆಗೆ ಕೊಚ್ಚಿ ಹೋಗಿದೆ.