ಕ್ಯಾನ್ ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಯಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದಿದೆ. ಮತ್ತೆ ಗಂಭೀರ್ ತಮ್ಮ ಮಾನಸಪುತ್ರ ಹರ್ಷಿತ್ ರಾಣಾಗೆ ಆಡುವ ಬಳಗದಲ್ಲಿ ಸ್ಥಾನ ನೀಡಿದ್ದಾರೆ.
									
			
			 
 			
 
 			
					
			        							
								
																	ಟೀಂ ಇಂಡಿಯಾ ಟಿ20 ಸ್ಪೆಷಲಿಸ್ಟ್ ಬೌಲರ್ ಎಂಬ ಖ್ಯಾತಿ ಅರ್ಷ್ ದೀಪ್ ಸಿಂಗ್ ರದ್ದು. ಏಕದಿನ ಸರಣಿಯಲ್ಲಿ ಅವರನ್ನು ಹೊರಗಿಟ್ಟು ಹರ್ಷಿತ್ ರಾಣಾರನ್ನೇ ಆಡಿಸಲಾಗಿತ್ತು. ಆದರೆ ಟಿ20 ಮಾದರಿಯಲ್ಲಿ ಅರ್ಷ್ ದೀಪ್ ಸಿಂಗ್ ರನ್ನೇ ಆಡಿಸಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು.
									
										
								
																	ಆದರೆ ಇಲ್ಲೂ ಗಂಭೀರ್ ಅರ್ಷ್ ದೀಪ್ ಗಿಂತ ತಮ್ಮ ಮೆಚ್ಚಿನ ಹುಡುಗ ಹರ್ಷಿತ್ ಗೇ ಮಣೆ ಹಾಕಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹರ್ಷಿತ್ ರಾಣಾರನ್ನು ಯಾವ ಮಾನದಂಡದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
									
											
							                     
							
							
			        							
								
																	ಟೀಂ ಇಂಡಿಯಾ ಆಡುವ ಬಳಗ ಇಂತಿದೆ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.