Select Your Language

Notifications

webdunia
webdunia
webdunia
webdunia

Video: ಮೈದಾನದಲ್ಲಿ ಸ್ಪ್ರೇ ಮಾಡಿದ ಪಾಕಿಸ್ತಾನ ಆಟಗಾರ್ತಿಯರು, ಪಂದ್ಯ ಸ್ಥಗಿತವಾಗಿದ್ದೇಕೆ ಗೊತ್ತಾ

INDWvsPAKW

Krishnaveni K

ಕೊಲಂಬೊ , ಭಾನುವಾರ, 5 ಅಕ್ಟೋಬರ್ 2025 (20:26 IST)
Photo Credit: X
ಕೊಲಂಬೊ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ವಿಶ್ವಕಪ್ ಪಂದ್ಯದ ನಡುವೆ ಪಾಕಿಸ್ತಾನ ಆಟಗಾರ್ತಿಯರು ಸ್ಪ್ರೇ ಬಾಟಲಿ ಹಿಡಿದು ಸ್ಪ್ರೇ ಮಾಡುತ್ತಿದ್ದ ಇತ್ತ 15 ನಿಮಿಷ ಕಾಲ ಸ್ಥಗಿತಗೊಂಡಿದೆ. ಇದಕ್ಕೆ ಕಾರಣವೂ ವಿಚಿತ್ರವಾಗಿದೆ.

ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ ಗಳಲ್ಲಿ 247 ರನ್ ಗಳಿಸಿದೆ. ಭಾರತದ ಬ್ಯಾಟಿಂಗ್ ವೇಳೆ ಮೈದಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇದರಿಂದಾಗಿ ಪಂದ್ಯ 15 ನಿಮಿಷಗಳ ಕಾಲ ಸ್ಥಗಿತವಾಗಿದೆ. ಆದರೆ ಮಳೆ ಅಥವಾ ಕೆಟ್ಟ ಹವಾಮಾನದಿಂದ ಪಂದ್ಯ ಸ್ಥಗಿತಗೊಂಡಿದ್ದಲ್ಲ.

ಮೈದಾನದ ತುಂಬಾ ಸೊಳ್ಳೆಗಳು, ಕೀಟಗಳ ಕಾಟದಿಂದ ಪಂದ್ಯ ಸ್ಥಗಿತಗೊಂಡಿದೆ. ಕೀಟಗಳಿಂದಾಗಿ ಭಾರತದ ಬ್ಯಾಟರ್ ಗಳಿಗೆ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿತ್ತು. ಇತ್ತ ಪಾಕ್ ಬೌಲರ್ ಗಳಿಗೂ ಬೌಲಿಂಗ್ ಮಾಡಲು ಕಷ್ಟವಾಗುತ್ತಿತ್ತು. ಹೀಗಾಗಿ ಆಟಗಾರ್ತಿಯರಿಗೆ ಸ್ಪ್ರೇ ಬಾಟಲಿ ನೀಡಲಾಯಿತು. ಕೀಟಾಣುಗಳನ್ನು ಓಡಿಸಲು ಸ್ವತಃ ಆಟಗಾರ್ತಿಯರು ಸ್ಪ್ರೇ ಮಾಡುತ್ತಿದ್ದರು.

ಮೂರು ನಿಮಿಷಗಳ ನಂತರ ಮತ್ತೆ ಕೀಟಾಣುಗಳ ಕಾಟ ಶುರುವಾಯಿತು. ಹೀಗಾಗಿ ಕೆಲವು ಕಾಲ ಉಭಯ ತಂಡಗಳ ಆಟಗಾರರನ್ನು ಮೈದಾನದಿಂದ ಹೊರಗೆ ಕಳುಹಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಸಿಬ್ಬಂದಿ ಯಂತ್ರದ ಮೂಲಕ ದಟ್ಟ ಹೊಗೆ ಹಾಕಿ ಕೀಟಾಣುಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲಾ ಗೌಜಿ ಗದ್ದಲದಲ್ಲಿ ಮೈದಾನದ ತುಂಬಾ ಹೊಗೆ ತುಂಬಿಕೊಂಡಿದ್ದರೆ ಆಟವೂ ಕೆಲವು ಕಾಲ ಸ್ಥಗಿತವಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

INDW vs PAKW: ಟಾಸ್ ವೇಳೆ ಭಾರತಕ್ಕೆ ಮೋಸ ಮಾಡಿದ ಪಾಕಿಸ್ತಾನ ನಾಯಕಿ: ವಿಡಿಯೋ ವೈರಲ್