Select Your Language

Notifications

webdunia
webdunia
webdunia
webdunia

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Harmanpreet Kaur

Krishnaveni K

ಮುಂಬೈ , ಮಂಗಳವಾರ, 21 ಅಕ್ಟೋಬರ್ 2025 (10:07 IST)
ಮುಂಬೈ: ವೇತನ ಮಾತ್ರ ಪುರುಷರಷ್ಟೇ ಬೇಕು. ಆದರೆ ಪರ್ಫಾರ್ಮೆನ್ಸ್ ಮಾತ್ರ ಝೀರೋ.. ಮಹಿಳಾ ಎಕದಿನ ವಿಶ್ವಕಪ್ ನಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗರ ಪರ್ಫಾರ್ಮೆನ್ಸ್ ಬಗ್ಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ಇಂಗ್ಲೆಂಡ್ ವಿರುದ್ಧ ಗೆಲ್ಲಬಹುದಾದ ಪಂದ್ಯವನ್ನೂ ಮಹಿಳೆಯರು ತಾವಾಗಿಯೇ ಕೈ ಚೆಲ್ಲಿದ್ದರು. ಇದಕ್ಕೆ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವೂ ಇದೇ ರೀತಿ ಆಗಿತ್ತು. ಅದಾದ ಬಳಿಕ ದೈತ್ಯ ಆಸ್ಟ್ರೇಲಿಯಾ ವಿರುದ್ಧ ಎಂದಿನದ್ದೇ ಕತೆ.

ಇದೀಗ ಮಹಿಳಾ ಕ್ರಿಕೆಟಿಗರಿಗೂ ಬಿಸಿಸಿಐ ಪುರುಷರಂತೇ ಸಮಾನ ವೇತನ ನೀಡುತ್ತಿದೆ. ಮಹಿಳಾ ಕ್ರಿಕೆಟಿಗರಿಗೂ ಐಪಿಎಲ್ ಆಯೋಜಿಸುತ್ತಿದೆ. ಉಭಯ ದೇಶಗಳ ಸರಣಿ ಆಯೋಜಿಸುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಮಹಿಳಾ ಕ್ರಿಕೆಟ್ ಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ.

ಆದರೂ ಪ್ರದರ್ಶನ ಮಾತ್ರ ಯಥಾವತ್ತಾಗಿದೆ. ಗೆಲ್ಲುವ ಪಂದ್ಯವನ್ನು ಕೊನೆಯ ಕ್ಷಣದಲ್ಲಿ ಕೈ ಚೆಲ್ಲುವುದು, ಒತ್ತಡ ನಿಭಾಯಿಸಲಾಗದೇ ಸೋಲುವುದು ನಿಂತಿಲ್ಲ. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಈ ಬಾರಿ ತವರಿನಲ್ಲೇ ಏಕದಿನ ವಿಶ್ವಕಪ್ ನಡೆಯುತ್ತಿದೆ. ಇದಕ್ಕೆ ಮೊದಲು ತವರಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗಳನ್ನೂ ಅಭ್ಯಾಸಕ್ಕಾಗಿ ಆಡಿಸಲಾಗಿತ್ತು. ಹಾಗಿದ್ದರೂ ಭಾರತದ ಅದೇ ರಾಗ, ಅದೇ ಹಾಡು. ಹೀಗಾಗಿಯೇ ಅಭಿಮಾನಿಗಳು ನಿಮಗೆ ವೇತನದಲ್ಲಿ, ಸೌಲಭ್ಯದಲ್ಲಿ ಸಮಾನತೆ ಬೇಕು, ಪ್ರದರ್ಶನದಲ್ಲಿ ಯಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ