Select Your Language

Notifications

webdunia
webdunia
webdunia
webdunia

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Women's World Cup Tournament, India Cricket, England Cricket

Sampriya

ಇಂದೋರ್‌ , ಸೋಮವಾರ, 20 ಅಕ್ಟೋಬರ್ 2025 (10:47 IST)
Photo Credit X
ಇಂದೋರ್‌: ಹೀದರ್ ನೈಟ್ ಅವರ ಅಮೋಘ ಶತಕದ ನೆರವಿನಿಂದ ಇಂಗ್ಲೆಂಡ್‌ ತಂಡವು ಮಹಿಳಾ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಭಾನುವಾರ 4 ರನ್‌ಗಳಿಂದ ಭಾರತ ತಂಡವನ್ನು ಮಣಿಸಿತು. ಈ ಮೂಲಕ ಇಂಗ್ಲೆಂಡ್‌ ತಂಡ ಸೆಮಿಫೈನಲ್‌ಗೆ ಮುನ್ನಡೆದರೆ, ಭಾರತದ ಹಾದಿ ಕಠಿಣವಾಗಿದೆ.

ಆತಿಥೇಯ ಭಾರತ ತಂಡವು ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ  ಸತತ ಮೂರನೇ ಸೋಲು ಅನುಭವಿಸಿದೆ. ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು 4 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಆಂಗ್ಲರು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕೂಡ ನಾಕೌಟ್ ಸುತ್ತಿಗೆ ತಲುಪಿವೆ.

ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡವು 8 ವಿಕೆಟ್‌ಗಳ ನಷ್ಟಕ್ಕೆ 288 ರನ್ ಗಳಿಸಿತು. ಮಾಜಿ ನಾಯಕಿ ಹೀದರ್ ನೈಟ್ 109 ರನ್ ಗಳಿಸಿದರು ಮತ್ತು ದೀಪ್ತಿ ಶರ್ಮಾ 4 ವಿಕೆಟ್ ಪಡೆದರು. ಭಾರತ 41 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 234 ರನ್ ಗಳಿಸಿತ್ತು. ಮುಂದಿನ 4 ಓವರ್‌ಗಳಲ್ಲಿ ಭಾರತ 3 ವಿಕೆಟ್‌ಗಳನ್ನು ಕಳೆದುಕೊಂಡು 50 ಓವರ್‌ಗಳಲ್ಲಿ ಕೇವಲ 284 ರನ್‌ಗಳನ್ನು ಗಳಿಸಲು ಶಕ್ತವಾಯಿತು.

ಭಾರತದ ಪರ ಸ್ಮೃತಿ ಮಂದಾನ 88, ಹರ್ಮನ್ಪ್ರೀತ್ ಕೌರ್ 70 ಮತ್ತು ದೀಪ್ತಿ ಶರ್ಮಾ 50 ರನ್ ಗಳಿಸಿದರು. ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 100 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನೀಡಿದರು. ಭಾರತ ಮೂರು ಅರ್ಧಶತಕಗಳನ್ನು ಗಳಿಸಿತು, ಆದರೆ ಅವು ಗೆಲುವಿಗೆ ಸಾಕಾಗಲಿಲ್ಲ.

ಅಂಕಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದರೂ ನ್ಯೂಜಿಲ್ಯಾಂಡ್ ತಂಡ ಸೋಲುಗಳ ಮೇಲೆ ಭಾರತದ ಸೆಮಿಸ್ ಪ್ರವೇಶ ಆಧಾರಪಟ್ಟಿದೆ. ಭಾರತ ಮುಂದಿನ ಎರಡೂ ಪಂದ್ಯ ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ. ಆ ಎರಡೂ ಪಂದ್ಯದಲ್ಲೂ ಭಾರತ ಸಹ ಗೆಲ್ಲಬೇಕಿದೆ. ಇದೇ 23ರಂದು ನ್ಯೂಜಿಲೆಂಡ್‌ ಮತ್ತು ಭಾರತ ತಂಡಗಳು ಮುಖಾಮುಖಿಯಾಗುತ್ತಿದ್ದು, ಆ ಪಂದ್ಯ ನಿರ್ಣಾಯಕವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌