Select Your Language

Notifications

webdunia
webdunia
webdunia
webdunia

AUS vs IND ODI: ರೋಹಿತ್, ವಿರಾಟ್, ಶುಭಮನ್‌ ಪೆವಿಲಿಯನ್‌ ಪರೇಡ್‌: ಭಾರತಕ್ಕೆ ಆರಂಭಿಕ ಆಘಾತ

India Cricket, Rohit Sharma, Virat Kohli

Sampriya

ಪರ್ತ್‌ , ಭಾನುವಾರ, 19 ಅಕ್ಟೋಬರ್ 2025 (10:03 IST)
Photo Credit X
ಪರ್ತ್‌: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದೆ. ನಿರೀಕ್ಷೆ ಮೂಡಿಸಿದ್ದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ನಾಯಕ ಶುಭಮನ್‌ ಗಿಲ್‌ ವೈಫಲ್ಯ ಅನುಭವಿಸಿದರು. 

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಆತಿಥೇಯ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ದುಕೊಂಡಿತು. ಈ ಹಣಾಹಣಿ ಪರ್ತ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟೀಂ ಇಂಡಿಯಾಗೆ ಆರಂಭದಲ್ಲೇ ಮುಗ್ಗರಿಸಿದೆ.

ಇನಿಂಗ್ಸ್‌ ಆರಂಭಿಸಿದ ನಾಯಕ ಶುಭಮನ್‌ ಗಿಲ್‌, ಮಾಜಿ ನಾಯಕ ರೋಹಿತ್‌ ಶರ್ಮಾ ಹಾಗೂ ರನ್‌ ವಿರಾಟ್‌ ಕೊಹ್ಲಿ ಬೇಗನೆ ಪೆವಿಲಿಯನ್‌ ಸೇರಿಕೊಂಡರು.

ಟೆಸ್ಟ್ ಹಾಗೂ ಟಿ20 ಮಾದರಿಗೆ ಈಗಾಗಲೇ ವಿದಾಯ ಹೇಳಿರುವ ರೋಹಿತ್‌, ವಿರಾಟ್‌, ಬರೋಬ್ಬರಿ 7 ತಿಂಗಳ ಬಳಿಕ ಟೀಂ ಇಂಡಿಯಾಗೆ ಮರಳಿದ್ದಾರೆ. ರೋಹಿತ್‌ 8 ರನ್‌ ಗಳಿಸಿದರೆ, ಕೊಹ್ಲಿ ಸೊನ್ನೆ ಸುತ್ತಿದರು. ನಾಯಕನಾಗಿ ಮೊದಲ ಏಕದಿನ ಸರಣಿ ಆಡುತ್ತಿರುವ ಗಿಲ್‌ (10 ರನ್‌) ಕೂಡ ನಿರಾಸೆ ಮೂಡಿಸಿದರು.

ಮಳೆ ಅಡಚಣೆ: ಮಳೆಯಿಂದಾಗಿ ಆಟ ನಿಂತಿದೆ. ಸದ್ಯ 8.5 ಓವರ್‌ಗಳು ಮುಕ್ತಾಯವಾಗಿದ್ದು ಭಾರತದ ಮೊತ್ತ 3 ವಿಕೆಟ್‌ಗೆ 25 ರನ್‌ ಆಗಿದೆ. ಉಪನಾಯಕ ಶ್ರೇಯಸ್‌ ಅಯ್ಯರ್‌ (2) ಹಾಗೂ ಇನ್ನೂ ಖಾತೆ ತೆರೆಯದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಕ್ರೀಸ್‌ನಲ್ಲಿದ್ದಾರೆ.

ಆಸ್ಟ್ರೇಲಿಯಾ ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಜಲ್‌ವುಡ್‌ ಮತ್ತು ನೇಥನ್‌ ಎಲಿಸ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದ್ದಾರೆ. ಆಂಧ್ರ ಪ್ರದೇಶದ ಆಲ್‌ರೌಂಡರ್ ನಿತೀಶ್‌ ಕುಮಾರ್‌ ರೆಡ್ಡಿ ಈ ಪಂದ್ಯದ ಮೂಲಕ ಭಾರತದ ಪರ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಮರಳಿದ ಕಿಂಗ್‌ ಕೊಹ್ಲಿ, ಸಹ ಆಟಗಾರರ ಜತೆಗಿನ ವಿರಾಟ್ ಕ್ಷಣ ನೋಡುವುದೇ ಖುಷಿ