Select Your Language

Notifications

webdunia
webdunia
webdunia
webdunia

ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್, ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್: ಶುಭಮನ್ ಗಿಲ್ ಬಲು ಜಾಣ

Shubhman Gill

Krishnaveni K

ಪರ್ತ್ , ಶನಿವಾರ, 18 ಅಕ್ಟೋಬರ್ 2025 (12:04 IST)
ಪರ್ತ್: ಟೀಂ ಇಂಡಿಯಾ ಹೊಸ ಏಕದಿನ ನಾಯಕರಾಗಿ ನೇಮಕವಾಗಿರುವ ಶುಭಮನ್ ಗಿಲ್ ಆಸ್ಟ್ರೇಲಿಯಾ ಸರಣಿಗೆ ಮುನ್ನ ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್ ಪಡೆದರೆ ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್ ಪಡೆದು ಬಲು ಜಾಣ ಎಂದು ನಿರೂಪಿಸಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ನಾಯಕರಾಗಿ ಎರಡು ಸರಣಿಯಲ್ಲಿ ತಂಡ ಮುನ್ನಡೆಸಿರುವ ಶುಭಮನ್ ಗಿಲ್ ಗೆ ಈಗ ಏಕದಿನ ನಾಯಕರಾಗಿ ಹೊಸ ಅಗ್ನಿಪರೀಕ್ಷೆ ಎದುರಾಗಿದೆ. ಇದುವರೆಗೆ ಎರಡು ಟೆಸ್ಟ್ ಸರಣಿಗಳಲ್ಲಿ ಯುವ ಆಟಗಾರರನ್ನು ಮುನ್ನಡೆಸಿದ್ದ ಗಿಲ್ ಈಗ ರೋಹಿತ್, ಕೊಹ್ಲಿಯಂತಹ ದಿಗ್ಗಜರಿರುವ ತಂಡವನ್ನು ಮುನ್ನಡೆಸಬೇಕಿದೆ. ಇದು ಗಿಲ್ ಗೆ ದೊಡ್ಡ ಸವಾಲು.

ಈ ನಡುವೆ ಆಸ್ಟ್ರೇಲಿಯಾಕ್ಕೆ ಬಂದಿಳಿದಿರುವ ಗಿಲ್ ನಿನ್ನೆ ಅಭ್ಯಾಸದ ನಡುವೆ ಎರಡೂ ದಿಗ್ಗಜ ಆಟಗಾರರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ವಿರಾಟ್ ಕೊಹ್ಲಿಯಿಂದ ಕೆಲವು ಬ್ಯಾಟಿಂಗ್ ಟಿಪ್ಸ್ ಪಡೆದಿದ್ದಾರೆ. ಇನ್ನು ರೋಹಿತ್ ಶರ್ಮಾ ಜೊತೆಗೂ ಮಾತುಕತೆ ನಡೆಸಿದ್ದು ಕಂಡುಬಂದಿದೆ.

ಇದುವರೆಗೆ ರೋಹಿತ್ ತಂಡದ ನಾಯಕರಾಗಿದ್ದರು. ಆದರೆ ಈ ಸರಣಿಯಿಂದ ಅವರು ಸಾಮಾನ್ಯ ಆಟಗಾರನಾಗಿ ತಂಡದಲ್ಲಿರಲಿದ್ದಾರೆ. ನಾಯಕತ್ವದಲ್ಲಿ ಮಿಂಚಬೇಕಾದರೆ ಈಗ ಗಿಲ್ ಗೆ ಅವರ ಮಾರ್ಗದರ್ಶನ ಅಗತ್ಯವಾಗಿದೆ. ಹೀಗಾಗಿ ರೋಹಿತ್ ರಿಂದಲೂ ಸಲಹೆ ಪಡೆದಿದ್ದು ಜಾಣತನದ ಹೆಜ್ಜೆಯಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು