Select Your Language

Notifications

webdunia
webdunia
webdunia
webdunia

ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು

Ajit Agarkar-Mohammed Shami

Krishnaveni K

ಮುಂಬೈ , ಶನಿವಾರ, 18 ಅಕ್ಟೋಬರ್ 2025 (10:25 IST)
Photo Credit: X
ಮುಂಬೈ: ನಾನು ಫಿಟ್ ಆಗಿದ್ದರೂ ನನ್ನನ್ನು ಆಯ್ಕೆ ಮಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಆಕ್ರೋಶ ಹೊರ ಹಾಕಿದ ವೇಗಿ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತಿರುಗೇಟು ನೀಡಿದ್ದು, ಫಿಟ್ ಇದ್ರೆ ನನಗೆ ಹೇಳಬೇಕಿತ್ತು ಎಂದಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ತನಗೆ ತಂಡದಲ್ಲಿ ಸ್ಥಾನ ಸಿಗದ ಬೇಸರವನ್ನು ಮೊಹಮ್ಮದ್ ಶಮಿ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ನಾನು ಫಿಟ್ ಆಗಿರದೇ ಇದ್ದಿದ್ದರೆ ದೇಶೀಯ ಕ್ರಿಕೆಟ್ ಆಡುತ್ತಿದ್ದೆನೇ? ಎಂದು ಪ್ರಶ್ನಿಸಿದ್ದರು.

ಇದಕ್ಕೀಗ ಅಜಿತ್ ಅಗರ್ಕರ್ ತಿರುಗೇಟು ನೀಡಿದ್ದಾರೆ. ಫಿಟ್ ಆಗಿದ್ದರೆ ನನಗೆ ಹೇಳಬೇಕಿತ್ತು. ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಅವರು ಫಿಟ್ ಆಗಿದ್ದರೆ ಇಂದು ತಂಡದಲ್ಲಿರುತ್ತಿದ್ದರು. ಈಗಷ್ಟೇ ದೇಶೀಯ ಕ್ರಿಕೆಟ್ ಶುರುವಾಗಿದೆ. ಅವರು ಸಾಕಷ್ಟು ಫಿಟ್ ಆಗಿದ್ದಾರಾ ಎಂದು ಕಾದುನೋಡೋಣ ಎಂದಿದ್ದಾರೆ.

ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೂ ಅಜಿತ್ ಅಗರ್ಕರ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ತಂಡದಲ್ಲಿ ಇರುತ್ತಾರೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ದಿನ ನಿವೃತ್ತಿಯಾಗುತ್ತೇನೆಂದು ಅಂದೇ ಹೇಳಿದ್ದರು ವಿರಾಟ್ ಕೊಹ್ಲಿ