Select Your Language

Notifications

webdunia
webdunia
webdunia
webdunia

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಲಂಡನ್ ವಿಮಾನವೇರಿದ್ದ ಕೊಹ್ಲಿ ಇಂದು ಮತ್ತೆ ಬಂದ್ರು

Virat Kohli

Krishnaveni K

ನವದೆಹಲಿ , ಮಂಗಳವಾರ, 14 ಅಕ್ಟೋಬರ್ 2025 (14:38 IST)
Photo Credit: X
ನವದೆಹಲಿ: ಐಪಿಎಲ್ 2025 ಗೆದ್ದ ಬಳಿಕ ಬೆಂಗಳೂರಿಗೆ ಬಂದು ವಿಜಯೋತ್ಸವದಲ್ಇ ಭಾಗಿಯಾದ ಬಳಿಕ ಸದ್ದಿಲ್ಲದೇ ಲಂಡನ್ ವಿಮಾನವೇರಿದ್ದ ವಿರಾಟ್ ಕೊಹ್ಲಿ ಇಂದು ಮತ್ತೆ ಭಾರತಕ್ಕೆ ಬಂದಿಳಿದಿದ್ದಾರೆ.

ಆರ್ ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದಲೇ ಬಂದಿದ್ದ ವಿರಾಟ್ ಕೊಹ್ಲಿ ಬಳಿಕ ಕಾಲ್ತುಳಿತ ದುರಂತವಾದ ಬಳಿಕ ಬೇಸರದಿಂದಲೇ ಲಂಡನ್ ವಿಮಾನವೇರಿದ್ದರು. ಇದಾದ ಬಳಿಕ ಅವರು ಭಾರತಕ್ಕೆ ಕಾಲಿಡಲೇ ಇಲ್ಲ.

ಇದೀಗ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಅವರು ತಂಡದ ಜೊತೆ ನಾಳೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಕಾರಣಕ್ಕೆ ಅವರು ಭಾರತಕ್ಕೆ ಬಂದಿಳಿದಿದ್ದಾರೆ.

ಇದೀಗ ಲಂಡನ್ ವಾಸಿಯಾಗಿರುವ ಕೊಹ್ಲಿ ಪಂದ್ಯಗಳಿದ್ದಾಗ ಮಾತ್ರ ಭಾರತಕ್ಕೆ ಬರುತ್ತಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ನಾಲ್ಕು ತಿಂಗಳ ಬಳಿಕ ಕೊಹ್ಲಿಯನ್ನು ನೋಡಿ ಅಭಿಮಾನಿಗಳು, ಪಪ್ಪರಾಜಿಗಳು ಫುಲ್ ಖುಷಿಯಾಗಿದ್ದರು. ಕೆಲವರು ಸೆಲ್ಫೀ ನೀಡುವಂತೆಯೂ ಮನವಿ ಮಾಡಿದ್ದರು. ಆದರೆ ಯಾರ ಮನವಿಗೂ ಕಿವಿಗೊಡದೇ ಕೊಹ್ಲಿ ಮಾತನಾಡದೇ ಕಾರು ಏರಿ ಹೋಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs WI: ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್