ದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಓಪನರ್ ಕೆಎಲ್ ರಾಹುಲ್ ಗೆ ಬೀಳಬಾರದ ಜಾಗಕ್ಕೆ ಚೆಂಡು ಬಿದ್ದು ಮೈದಾನದಲ್ಲೇ ನೋವು ಅನುಭವಿಸುವ ವಿಡಿಯೋ ಈಗ ವೈರಲ್ ಆಗಿದೆ.
ವೆಸ್ಟ್ ಇಂಡೀಸ್ ನೀಡಿದ 121 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಇಂದಿನ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದ್ದು ಗೆಲುವಿಗೆ ಇನ್ನು ಕೇವಲ 58 ರನ್ ಗಳಿಸಿದರೆ ಸಾಕಾಗಿದೆ. ಭಾರತದ ಪರ ಕೆಎಲ್ ರಾಹುಲ್ 25, ಸಾಯಿ ಸುದರ್ಶನ್ 30 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ವಿಂಡೀಸ್ ನ ವೇಗಿ ಸೀಲ್ಸ್ ಬೌಲಿಂಗ್ ನಲ್ಲಿ ಕೆಎಲ್ ರಾಹುಲ್ ಗಾಯಗೊಂಡಿದ್ದಾರೆ. ಚೆಂಡು ನೇರವಾಗಿ ಅವರ ಖಾಸಗಿ ಭಾಗದ ಕಡೆಗೆ ಬಡಿದಿದೆ. ಪರಿಣಾಮ ನೋವು ತಾಳಲಾರದೇ ಕುಂಟುತ್ತಾ ಓಡಿದ ರಾಹುಲ್ ನೆಲಕ್ಕೆ ಬಿದ್ದಿದ್ದಾರೆ. ಬಳಿಕ ಫಿಸಿಯೋಗಳು ಬಂದು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರು ಬ್ಯಾಟಿಂಗ್ ಮುಂದುವರಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.