ದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ಫೀಲ್ಡರ್ ಸಾಯಿ ಸುದರ್ಶನ್ ಕೈಯೊಳಗೆ ಬಾಲ್ ತಾನಾಗಿಯೇ ಬಂದು ಕೂತ ವಿಡಿಯೋ ಈಗ ವೈರಲ್ ಆಗಿದೆ.
ಸಾಮಾನ್ಯವಾಗಿ ಬಾಲ್ ಕ್ಯಾಚ್ ಪಡೆಯಲು ಫೀಲ್ಡರ್ ಗಳು ಶ್ರಮಪಡಬೇಕು. ಆದರೆ ಸಾಯಿ ಸುದರ್ಶನ್ ಗೆ ಅನಾಯಸವಾಗಿ ಕ್ಯಾಚ್ ಸಿಕ್ಕಿದೆ. ಬಾಲ್ ತಾನಾಗಿಯೇ ಕೈಯೊಳಗೆ ಬಂದು ಸೇರಿದ್ದರಿಂದ ಅನಾಯಾಸ ಮತ್ತು ಅಷ್ಟೇ ಅದ್ಭುತ ಕ್ಯಾಚ್ ಇದು ಎನ್ನಬಹುದು.
ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಜಾನ್ ಚಾಂಪ್ ಬೆಲ್ ಫಾರ್ವರ್ಡ್ ಶಾರ್ಟ್ ಲೆಗ್ ನತ್ತ ಬೀಸಿ ಹೊಡೆದರು. ಆದರೆ ಬಾಲ್ ಬ್ಯಾಟರ್ ಗೆ ಅತೀ ಸಮೀಪದಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಸಾಯಿ ಸುದರ್ಶನ್ ಕೈ ಗೇ ಹೋಗಿಬಿತ್ತು. ಬಾಲ್ ಮುಖಕ್ಕೆ ಹೊಡೆಯದಂತೆ ಸಾಯಿ ಸುದರ್ಶನ್ ಕೈ ಅಡ್ಡ ಹಿಡಿದರೆ ಕೈಗೇ ಬಾಲ್ ಬಂದು ಬಿತ್ತು.
ಇದರಿಂದ ಸಾಯಿ ಸುದರ್ಶನ್ ತೀವ್ರ ನೋವಿಗೊಳಗಾದರು. ಆದರೂ ಔಟ್ ಮಾಡಿದ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇನ್ನು ಸಾಯಿ ಸುದರ್ಶನ್ ಕ್ಯಾಚ್ ಹಿಡಿದಿದ್ದು ಸಹ ಆಟಗಾರರಿಗೆ ಮತ್ತು ವಿಂಡೀಸ್ ಬ್ಯಾಟಿಗನಿಗೂ ನಂಬಲಸಾಧ್ಯವಾಗಿತ್ತು. ಈ ವಿಡಿಯೋ ಈಗ ವೈರಲ್ ಆಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ ಭಾರತ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಇಂದಿನ ದಿನದಂತ್ಯಕ್ಕೆ ವಿಂಡೀಸ್ 4 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದೆ. ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದ್ದಾರೆ.