ದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಕೆಎಲ್ ರಾಹುಲ್ ಗೆ ಇಲ್ಲಿಯೂ ತವರಿನಂತೇ ಅಭಿಮಾನಿಗಳು ಸ್ವಾಗತಿಸಿದ್ದಾರೆ.
ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಮೊದಲ ದಿನದ ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದೆ. ಕೆಎಲ್ ರಾಹುಲ್ 38 ರನ್ ಗಳಿಸಿ ಔಟಾಗಿದ್ದಾರೆ. ಆದರೆ ಇದಕ್ಕೆ ಮೊದಲು ಅವರು ಮೊದಲ ವಿಕೆಟ್ ಗೆ ಯಶಸ್ವೀ ಜೈಸ್ವಾಲ್ ಜೊತೆ ಅರ್ಧಶತಕದ ಜೊತೆಯಾಟವಾಡಿದ್ದಾರೆ.
ಇನ್ನು, ಕೆಎಲ್ ರಾಹುಲ್ ಗೆ ಇಲ್ಲಿ ತವರಿನಂತೇ ಅಭಿಮಾನಿಗಳ ಸ್ವಾಗತ ಸಿಕ್ಕಿದೆ. ರಾಹುಲ್ ಕ್ರೀಸ್ ಗೆ ಬರುತ್ತಿದ್ದಂತೇ ಅಭಿಮಾನಿಗಳು ಕೆಎಲ್ ಎಂದು ಜೋರಾಗಿ ಕೂಗಿ ಅವರನ್ನು ಸ್ವಾಗತಿಸಿದ್ದಾರೆ. ಓರ್ವನಂತೂ ರಾಹುಲ್ ಕ್ಲಾಸ್ ನೋಡಲು ನಾವು ಶಾಲೆ ಕ್ಲಾಸ್ ಬಂಕ್ ಮಾಡಲೂ ರೆಡಿ ಎಂದು ಪ್ಲೇಕಾರ್ಡ ಹಿಡಿದು ಕೂತಿದ್ದರು. ಐಪಿಎಲ್ ನಲ್ಲಿ ಕೆಎಲ್ ರಾಹುಲ್ ದೆಹಲಿ ಪರ ಆಡುತ್ತಾರೆ. ಹೀಗಾಗಿ ಅವರಿಗೆ ಇದು ಮತ್ತೊಂದು ತವರಿನಂತಾಗಿದೆ. ಆದರೆ ಉತ್ತಮ ಆರಂಭ ಪಡೆದರೂ ಅವರಿಗೆ ಅದನ್ನು ಅರ್ಧಶತಕವಾಗಿ ಪರಿವರ್ತಿಸಲು ಸಾಧ್ಯವಾಗಲೇ ಇಲ್ಲ.
ಇನ್ನು, ಇನ್ನೊಂದೆಡೆ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದು ಸಾಯಿ ಸುದರ್ಶನ್ 16 ರನ್ ಗಳಿಸಿ ಕ್ರೀಸ್ ಹಂಚಿಕೊಂಡಿದ್ದಾರೆ.