Select Your Language

Notifications

webdunia
webdunia
webdunia
webdunia

IND vs WI TEST: ಇನ್ನಿಂಗ್ಸ್‌ ಸೋಲು ತಪ್ಪಿಸಿ ಭಾರತಕ್ಕೆ 121 ರನ್ ಗುರಿ ನೀಡಿದ ವೆಸ್ಟ್‌ ಇಂಡೀಸ್‌

Arun Jaitley Stadium, India Cricket, West Indies Cricket

Sampriya

ನವದೆಹಲಿ , ಸೋಮವಾರ, 13 ಅಕ್ಟೋಬರ್ 2025 (16:53 IST)
Photo Credit X
ನವದೆಹಲಿ: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್‌ಇಂಡೀಸ್‌ ವಿರುದ್ಧದ  ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತವು ಗೆಲುವಿನತ್ತ ಹೆಜ್ಜೆ ಹಾಕಿದೆ.

ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಮೊದಲ ಸೆಷನ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್‌ ಊಟದ ಬಳಿಕ ದಿಢೀರ್ ಕುಸಿತ ಅನುಭವಿಸಿದೆ. 

79 ರನ್‌ಗಳ ಕೊನೆಯ ವಿಕೆಟ್ ಜೊತೆಯಾಟದ ಹೊರತಾಗಿಯೂ ವಿಂಡೀಸ್ 390 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಆ ಮೂಲಕ ಭಾರತಕ್ಕೆ 121 ರನ್‌ಗಳ ಗುರಿ ನೀಡಿದೆ. ಜಸ್‌ಪ್ರೀತ್ ಬುಮ್ರಾ ಹಾಗೂ ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದುಕೊಂಡರು.

ವಿಂಡೀಸ್ ಪರ ಕ್ಯಾಂಪ್‌ಬೆಲ್ 199 ಎಸೆತಗಳಲ್ಲಿ 115 ರನ್ ಗಳಿಸಿ (12 ಬೌಂಡರಿ, 3 ಸಿಕ್ಸರ್) ಔಟ್ ಆದರು. ಕಲಾತ್ಮಕ ಇನಿಂಗ್ಸ್ ಕಟ್ಟಿದ ಹೋಪ್ 214 ಎಸೆತಗಳಲ್ಲಿ 103 ರನ್ ಗಳಿಸಿ (12 ಬೌಂಡರಿ, 2 ಸಿಕ್ಸರ್) ಔಟ್ ಆದರು. ನಾಯಕ ರೋಸ್ಟನ್ ಚೇಸ್ 40 ರನ್, ಜಸ್ಟೀನ್ ಗ್ರೀವ್ಸ್ ಅಜೇಯ 50 ಹಾಗೂ ಜೇಡನ್ ಗ್ರೀವ್ಸ್ 32 ರನ್ ಗಳಿಸಿದರು.

ಈ ಮೊದಲು ಯಶಸ್ವಿ ಜೈಸ್ವಾಲ್ (175) ಹಾಗೂ ನಾಯಕ ಶುಭಮನ್ ಗಿಲ್ (ಔಟಾಗದೇ 129) ಅಮೋಘ ಶತಕಗಳ ಬೆಂಬಲದೊಂದಿಗೆ ಭಾರತ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 518 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಬಳಿಕ ಕುಲದೀಪ್ ಯಾದವ್ (82ಕ್ಕೆ 5) ದಾಳಿಗೆ ಸಿಲುಕಿದ್ದ ವಿಂಡೀಸ್ 248 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಭಾರತ ಮೊದಲ ಇನಿಂಗ್ಸ್‌ನಲ್ಲಿ 270 ರನ್‌ಗಳ ಬೃಹತ್ ಮುನ್ನಡೆ ಗಳಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

IND vs WI: ಇನಿಂಗ್ಸ್ ಸೋಲು ತಪ್ಪಿಸಿಕೊಂಡ ವೆಸ್ಟ್ ಇಂಡೀಸ್ ಆದರೆ ಮತ್ತೆ ಅದೇ ಕತೆ