Select Your Language

Notifications

webdunia
webdunia
webdunia
webdunia

IND vs WI: ಇನಿಂಗ್ಸ್ ಸೋಲು ತಪ್ಪಿಸಿಕೊಂಡ ವೆಸ್ಟ್ ಇಂಡೀಸ್ ಆದರೆ ಮತ್ತೆ ಅದೇ ಕತೆ

IND vs WI

Krishnaveni K

ನವದೆಹಲಿ , ಸೋಮವಾರ, 13 ಅಕ್ಟೋಬರ್ 2025 (13:40 IST)
Photo Credit: X
ದೆಹಲಿ: ಭಾರತ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಅಂತರದ ಸೋಲು ತಪ್ಪಿಸಿಕೊಳ್ಳುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಗಿದೆ. ಆದರೆ ಬ್ಯಾಟಿಂಗ್ ನಲ್ಲಿ ಮತ್ತೆ ಅದೇ ತಪ್ಪು ಮಾಡಿದೆ.
 

ಮೊದಲ ಇನಿಂಗ್ಸ್ ನಲ್ಲಿ ಭಾರತ 518 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ವಿಂಡೀಸ್ ಮೊದಲ ಇನಿಂಗ್ಸ್ ನಲ್ಲಿ ಕೇವಲ 248 ಕ್ಕೆ ಆಲೌಟ್ ಆಯಿತು. ಬಳಿಕ ಭಾರತ ಫಾಲೋ ಆನ್ ಹೇರಿತು. ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ವಿಂಡೀಸ್ ಅಗ್ರ ಕ್ರಮಾಂಕ ಹೋರಾಟ ನೀಡಿತು.

ಜಾನ್ ಚಾಂಪ್ ಬೆಲ್ 113, ಶೈ ಹೋಪ್ 103 ಮತ್ತು ನಾಯಕ ರೋಸ್ಟನ್ ಚೇಸ್ 40 ರನ್ ಗಳಿಸಿದರು. ಆದರೆ ಒಂದು ಹಂತದಲ್ಲಿ 212 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ನಂತರ ಕುಸಿತ ಕಂಡಿದೆ. ಇದೀಗ 307 ರನ್ ಗಳಿಸಿದ್ದು 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಸದ್ಯದ ಪರಿಸ್ಥಿತಿ ನೋಡಿದರೆ ಟೀಂ ಇಂಡಿಯಾಗೆ ಗೆಲ್ಲಲು 100 ರನ್ ಗಿಂತ ಹೆಚ್ಚು ಗಳಿಸಬೇಕಾದ ಅಗತ್ಯ ಬಾರದು. ದಿಡೀರ್ ಕುಸಿತ ಕಾಣದೇ ಇದ್ದಿದ್ದರೆ ವಿಂಡೀಸ್ ಸವಾಲಿನ  ಗುರಿಯನ್ನೇ ನೀಡಬಹುದಿತ್ತು. ಭಾರತದ ಪರ ಕುಲದೀಪ್ ಯಾದವ್ 3, ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಕಬಳಿಸಿದರು. ಇದೀಗ ವಿಂಡೀಸ್ ಕೇವಲ 37 ರನ್ ಗಳ ಮುನ್ನಡೆಯಲ್ಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

INDW vs AUSW: ಭಾರತ ಮಹಿಳೆಯರಿಗೆ ಮತ್ತೆ ಸೋಲು, ವಿಶ್ವಕಪ್ ಗೆಲ್ಲೋ ಕನಸು ನನಸಾಗಲು ಸಾಧ್ಯನಾ