ದೆಹಲಿ: ಬಹಳ ದಿನಗಳ ನಂತರ ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿರುವ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಒಬ್ಬರನ್ನೊಬ್ಬರು ನೋಡಿದಾಗ ಎಷ್ಟು ಖುಷಿ ಪಟ್ಟರು ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಇಬ್ಬರೂ ದಿಗ್ಗಜರೂ ಸಾಮಾನ್ಯ ಆಟಗಾರರಾಗಿ ತಂಡದಲ್ಲಿರಲಿದ್ದಾರೆ. ಇಂದು ಬೆಳಿಗ್ಗೆ ಶುಭಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾದ ಪ್ರಮುಖ ಆಟಗಾರರು ದೆಹಲಿ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ.
ಇದಕ್ಕೆ ಮೊದಲು ಎಲ್ಲಾ ಆಟಗಾರರು ಹೋಟೆಲ್ ಕೊಠಡಿಯಿಂದ ಒಟ್ಟಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮೊದಲೇ ಟೀಂ ಬಸ್ ಏರಿ ಕೂತಿದ್ದರು. ರೋಹಿತ್ ನಂತರ ಬಂದಿದ್ದಾರೆ. ಮೊದಲೇ ಬಸ್ ನಲ್ಲಿ ಕೂತಿದ್ದ ಕೊಹ್ಲಿಯನ್ನು ದೂರದಿಂದಲೇ ಗಮನಿಸಿದ ರೋಹಿತ್ ತಲೆಬಾಗಿ ನಮಸ್ಕರಿಸಿದ್ದಾರೆ. ಬಳಿಕ ಬಸ್ ಒಳಗೆ ಹೋದ ಕೂಡಲೇ ಕೊಹ್ಲಿ ಕೂಡಾ ನಗುತ್ತಲೇ ರೋಹಿತ್ ರನ್ನು ತಬ್ಬಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.