ಕೊಲಂಬೊ: ಪುರುಷರ ತಂಡದಂತೇ ಭಾರತ ಮಹಿಳಾ ಕ್ರಿಕೆಟಿಗರೂ ಪಾಕಿಸ್ತಾನವನ್ನು ಸೋಲಿಸಿ ಮೂತಿಯೂ ನೋಡದೇ ಪೆವಿಲಿಯನ್ ಗೆ ಹಿಂತಿರುಗಿದ್ದಾರೆ.
ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ನಿನ್ನೆ ಪಾಕಿಸ್ತಾನವನ್ನು 88 ರನ್ ಗಳಿಂದ ಸೋಲಿಸಿದ ಭಾರತ ವನಿತೆಯರು ಪುರುಷರಂತೇ ಕೈ ಕುಲುಕದೇ ಪೆವಿಲಿಯನ್ ಗೆ ಮರಳಿದ್ದಾರೆ. ಇದರೊಂದಿಗೆ ಕಳೆದ ವಾರ ಭಾರತದ ಪುರುಷರ ತಂಡ ಈ ವಾರ ಮಹಿಳೆಯರ ತಂಡ ಪಾಕಿಸ್ತಾನವನ್ನು ಮಣ್ಣು ಮುಕ್ಕಿಸಿದೆ.
ನಿನ್ನೆ ಟಾಸ್ ಸಂದರ್ಭದಲ್ಲಿಯೂ ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಪಾಕ್ ನಾಯಕಿಯ ಕೈ ಕುಲುಕಿರಲಿಲ್ಲ. ಪಂದ್ಯ ಮುಗಿದ ನಂತರವೂ ಎಲ್ಲಾ ಭಾರತೀಯ ಆಟಗಾರರು ಅಂಪಾಯರ್ ಕೈ ಕುಲುಕಿ ಸಾಲಾಗಿ ಪೆವಿಲಿಯನ್ ಗೆ ಮರಳಿದ್ದಾರೆ.
ಈ ಬಗ್ಗೆ ಮೊದಲೇ ಬಿಸಿಸಿಐ ಅಧಿಕೃತ ಸೂಚನೆ ನೀಡಿತ್ತು. ಹೀಗಾಗಿ ಈ ಬಾರಿ ಪಾಕಿಸ್ತಾನ ಯಾವುದೇ ಹೈಡ್ರಾಮಾ ಸೃಷ್ಟಿಸುವುದಕ್ಕೆ ಅವಕಾಶವಿರಲಿಲ್ಲ. ಪಾಕ್ ಆಟಗಾರರೂ ತಮ್ಮ ಪಾಡಿಗೆ ತಾವು ಪೆವಿಲಿಯನ್ ಗೆ ಮರಳಿದ್ದಾರೆ.