ಮುಂಬೈ: ಅಂದು ಗೌತಮ್ ಗಂಭೀರ್, ಇಂದು ಜೆಮಿಮಾ. ಕಲೆ ಒಳ್ಳೆಯದೇ ಎಂಬ ಜಾಹೀರಾತನ್ನು ನಿಜ ಮಾಡುವ ಎರಡು ನಿದರ್ಶನಗಳು ಇದು. ಮಹಿಳೆಯರ ಏಕದಿನ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 
									
			
			 
 			
 
 			
					
			        							
								
																	ಈ ಹಿಂದೆ 2011 ರಲ್ಲಿ ಪುರುಷರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡದ ಗೆಲುವಿಗೆ ಪ್ರಮುಖ ಕಾರಣ ಗೌತಮ್ ಗಂಭೀರ್ ಅವರ ಇನಿಂಗ್ಸ್. ಭಾರತಕ್ಕೆ ಅಂದು ಆಸರೆಯಾಗಿದ್ದ ಗಂಭೀರ್ 97 ರನ್ ಸಿಡಿಸಿದ್ದೇ ಭಾರತದ ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣವಾಗಿತ್ತು. ಅಂದು ಅವರ ಜೆರ್ಸಿ ಪೂರ್ತಿ ಕೆಸರಿನ ಕಲೆಯಾಗಿತ್ತು.
									
										
								
																	ನಿನ್ನೆ ಜೆಮಿಮಾ ರೊಡ್ರಿಗಸ್ ಭಾರತ ಮಹಿಳೆಯರ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಸೆಮಿಫೈನಲ್ ನಲ್ಲಿ ಐತಿಹಾಸಿಕ ಗೆಲುವು ಕೊಡಿಸಿದ್ದರು. ಅವರ ಶತಕದ ಇನಿಂಗ್ಸ್ ಭಾರತೀಯ ಕ್ರಿಕೆಟ್ ರಂಗ ಯಾವತ್ತೂ ಮರೆಯಲ್ಲ. ಈ ವೇಳೆ ಅವರ ಜೆರ್ಸಿ ಮೇಲೂ ಕೊಳೆಯಾಗಿತ್ತು.
									
											
							                     
							
							
			        							
								
																	ಹೀಗಾಗಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಲೆ ಒಳ್ಳೆಯದೇ ಎಂದು ಗಂಭಿರ್ ಮತ್ತು ಜೆಮಿಮಾ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.