ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಟಿ20 ಪಂದ್ಯ ಇಂದು ನಡೆಯಲಿದ್ದು, ಎಷ್ಟು ಗಂಟೆಗೆ ಆರಂಭವಾಗಲಿದೆ, ಲೈವ್ ಮಾಹಿತಿ ಇಲ್ಲಿದೆ ನೋಡಿ.
									
			
			 
 			
 
 			
					
			        							
								
																	ಮೊದಲ ಟಿ20 ಪಂದ್ಯ ಕ್ಯಾನ್ ಬೆರಾದಲ್ಲಿ ಆಯೋಜನೆಯಾಗಿತ್ತು. ಆದರೆ ಮಳೆಯಿಂದಾಗಿ ಕೇವಲ 10 ಓವರ್ ಗಳ ಪಂದ್ಯವಷ್ಟೇ ನಡೆದಿತ್ತು. ಇದರಿಂದಾಗಿ ಯಾವುದೇ ಫಲಿತಾಂಶ ಕಾಣದೇ ಮೊದಲ ಪಂದ್ಯ ಮುಕ್ತಾಯವಾಗಿತ್ತು. ಇದೀಗ ನಾಲ್ಕು ಪಂದ್ಯಗಳು ಬಾಕಿಯಿದ್ದು ಎರಡನೇ ಪಂದ್ಯ ಇಂದು ಮೆಲ್ಬೊರ್ನ್ ಮೈದಾನದಲ್ಲಿ ನಡೆಯಲಿದೆ.
									
										
								
																	ಭಾರತಕ್ಕೆ ನಾಯಕ ಸೂರ್ಯಕುಮಾರ್ ಯಾದವ್ ಫಾರ್ಮ್ ಗೆ ಬಂದಿರುವುದು ದೊಡ್ಡ ಚಿಂತೆ ನಿವಾರಿಸಿದೆ. ಆದರೂ ಚುಟುಕು ಕ್ರಿಕೆಟ್ ನಲ್ಲಿ ಹಿಂದಿನ ದಾಖಲೆಗಳು, ಫಾರ್ಮ್ ಯಾವುದೂ ಲೆಕ್ಕಕ್ಕೆ ಬರಲ್ಲ. ಭಾರತದ ಯುವ ಸೆನ್ಸೇಷನಲ್ ಬ್ಯಾಟಿಗ ಅಭಿಷೇಕ್ ಶರ್ಮಾ ಕಳೆದ ಪಂದ್ಯದಲ್ಲಿ ಬೇಗನೇ ಔಟಾಗಿದ್ದರು. ಆದರೆ ಎಂಸಿಜಿ ಮೈದಾನದಲ್ಲಿ ದೊಡ್ಡ ಸ್ಕೋರ್ ಮಾಡುವುದು ಎಲ್ಲಾ ಬ್ಯಾಟಿಗರ ಕನಸು. ಅದನ್ನು ಅವರು ಇಂದು ನನಸು ಮಾಡಬಹುದು ಎಂಬ ವಿಶ್ವಾಸವಿದೆ.
									
											
							                     
							
							
			        							
								
																	ಈ ಪಂದ್ಯಕ್ಕೂ ಭಾರತ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.45 ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.