ನವದೆಹಲಿ: ಹರ್ಮನ್ ಪ್ರೀತ್ ಹಾಗೂ ಜೆಮಿಮಾ ರಾಡ್ರಿಗಸ್ ಅವರ ಅದ್ಭುತ ಜತೆಯಾಟದ ಮೂಲಕ ಭಾರತ, ಆಸ್ಟ್ರೇಲಿಯಾವನ್ನು ಬಗ್ಗು ಬಡಿಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. 
									
			
			 
 			
 
 			
					
			        							
								
																	ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಾಟದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ಫೈನಲ್‌ಗೆ ತಲುಪುವಂತೆ ಮಾಡಿದೆ. 
									
										
								
																	ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯ, ಉತ್ತಮ ಆರಂಭದೊಂದಿಗೆ  49.5 Ovಗೆ ಆಲ್ ಔಟ್ ಆಗಿ 338 ರನ್‌ಗಳ ದೊಡ್ಡ ರನ್ ಗಳಿಸಿತು. ಇದನ್ನು ಚೇಸಿಂಗ್ ಶುರು ಮಾಡಿದ ಭಾರತ ಆರಂಭದಲ್ಲೇ ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಔಟ್ ಆಗುವ ಮೂಲಕ ದೊಡ್ಡ ಆಘಾತ ನೀಡಿತು. ನಂತರ ಬಂದ ಜೆಮಿಮಾ ರಾಡ್ರಿಗಸ್ ಹಾಗೂ ಹರ್ಮನ್ ಪ್ರೀತ್ ಜತೆಯಾಟ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಕೊಡುಗೆಯನ್ನು ನೀಡಿದರು. 
									
											
							                     
							
							
			        							
								
																	ಜೆಮಿಮಾ ರಾಡ್ರಿಗಸ್ 134 ಎಸೆತಕ್ಕೆ 127ರನ್, ಹರ್ಮನ್ ಪ್ರೀತಿ  88 ಎಸೆತಕ್ಕೆ 89 ರನ್, ಸ್ಮೃತಿ ಮಂಧಾನ24 ಎಸೆತಕ್ಕೆ 24 ರನ್, ಅಮನ್‌ಜ್ಯೋತ್ ಕೌರ್ 8 ಎಸೆತಕ್ಕೆ 15ರನ್, ಶೆಫಾಲಿ ವರ್ಮಾ 5 ಎಸೆತಕ್ಕೆ 10ರನ್,  ದೀಪ್ತಿ ಶರ್ಮಾ 17 ಎಸೆತಕ್ಕೆ 24ರನ್, ರಿಚಾ ಘೋಸ್ 16 ಎಸೆತಕ್ಕೆ 26ರನ್ ಗಳಿಸುವ ಮೂಲಕ ಭಾರತ 5ವಿಕೆಟ್‌ಗಳ ಅಮೋಘ ಜಯಗಳಿಸಿತು.