Select Your Language

Notifications

webdunia
webdunia
webdunia
webdunia

INDW vs AUSW: ಪಂದ್ಯಾಟದ ವೇಳೇ ಯಾಕೆ ಕಪ್ಪು ಪಟ್ಟಿ ಕಟ್ಟಿದ ಆಟಗಾರ್ತಿಯರು

Women’s World Cup Semifinale Live

Sampriya

ನವಿ ಮುಂಬೈ , ಗುರುವಾರ, 30 ಅಕ್ಟೋಬರ್ 2025 (16:18 IST)
Photo Credit X
ನವಿ ಮುಂಬೈ: ಕ್ರಿಕೆಟ್ ಅಭ್ಯಾಸದ ವೇಳೆ ಚೆಂಡು  ತಲೆಗೆ ತಗುಲಿ ಆಸ್ಟ್ರೇಲಿಯಾದ 17ವರ್ಷದ ಬಾಲಕ ಬೆನ್ ಆಸ್ಟಿನ್ ಅವರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. 

ಈ ಹಿನ್ನೆಲೆ ಐಸಿಸಿ ಮಹಿಳಾ ವಿಶ್ವಕಪ್ 2025 ರ ಸೆಮಿಫೈನಲ್ ಘರ್ಷಣೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಮಹಿಳಾ ತಂಡಗಳು ಕಪ್ಪು ತೋಳುಗಳನ್ನು ಧರಿಸಿ, ಮೃತ ಬೆನ್‌ಗೆ ಸಂತಾಪ ಸೂಚಿಸಿದರು.

ಹದಿಹರೆಯದ ಬೆನ್ ಆಸ್ಟಿನ್ ಅವರ ಗಂಭೀರ ಗಾಯಕ್ಕೊಳಗಾಗಿ ಸಾವನ್ನಪ್ಪಿದರು.  

ಸ್ಥಳೀಯ ಫೆರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್‌ನಲ್ಲಿ ತಾಲೀಮು ನಡೆಸುತ್ತಿದ್ದ 17 ವರ್ಷದ ಬೆನ್ ಆಸ್ಟಿನ್ ಮೃತಪಟ್ಟ ಬಾಲಕ. ಮರ್ವ್
ಹ್ಯೂಸ್ ದುರಂತದ ಬಳಿಕ ನಡೆದಿರುವ ಈ ಘಟನೆ ಕ್ರಿಕಟ್ ವಲಯಕ್ಕ ತೀವ್ರ ಆಘಾತ ನೀಡಿದ್ದು ಆಟಗಾರನ ಕುಟುಂಬ, ಸ್ನೇಹಿತರು ಶೋಕದಲ್ಲಿ ಮುಳುಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

INDW vs AUSW: ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತ ವನಿತೆಯರಿಗೆ ಸಂಕಷ್ಟ