ಮುಂಬೈ: ಏಕದಿನ ವಿಶ್ವಕಪ್ ಗೆದ್ದ ಮಹಿಳೆಯರಿಗೆ ಬಿಸಿಸಿಐ ಬಹುಮಾನ ಘೋಷಿಸಿದ ಬೆನ್ನಲ್ಲೇ ಫ್ಯಾನ್ಸ್ ಪುರುಷರಿಗೊಂದು, ಮಹಿಳೆಯರಿಗೊಂದು ನ್ಯಾಯನಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ 51 ಕೋಟಿ ರೂ. ಬಹುಮಾನ ಘೋಷಿಸಿದೆ. ಆದರೆ ಇದಕ್ಕೆ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪುರಷರು ಟಿ20 ವಿಶ್ವಕಪ್ ಗೆದ್ದಾಗ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಿಸಿತ್ತು. ಚಾಂಪಿಯನ್ಸ್ ಟ್ರೋಫಿ ಗೆದ್ದಾಗ 58 ಕೋಟಿ ರೂ. ಬಹುಮಾನ ಘೋಷಿಸಿತ್ತು. ಇತ್ತೀಚೆಗೆ ಏಷ್ಯಾ ಕಪ್ ಗೆದ್ದಾಗ 21 ಕೋಟಿ ರೂ. ಬಹುಮಾನ ನೀಡಲಾಗಿತ್ತು. ಆದರೆ ಈಗ ಮಹಿಳೆಯರಿಗೆ ಕೇವಲ 51 ಕೋಟಿ ರೂ. ಬಹುಮಾನ ನೀಡಲಾಗಿದೆ ಎಂಬುದು ಫ್ಯಾನ್ಸ್ ಅಸಮಾಧಾನವಾಗಿದೆ.
ಮೊದಲ ಬಾರಿಗೆ ಮಹಿಳೆಯರು ಕಪ್ ಗೆದ್ದಿದ್ದಾರೆ. ಇದು ಮಹಿಳಾ ಕ್ರಿಕೆಟ್ ಗೇ ಸ್ಪೂರ್ತಿ ನೀಡಿದ ಗೆಲುವು. ಮಹಿಳಾ ಕ್ರಿಕೆಟಿಗರು ಇನ್ನಷ್ಟು ಬೆಳೆಯಬೇಕಿದೆ. ವೇತನ ವಿಚಾರದಲ್ಲಿ ಸಮಾನತೆ ತರಲಾಗಿದೆ. ಈಗ ಬಹುಮಾನ ಮೊತ್ತದಲ್ಲೂ ಸಮಾನತೆ ನೀಡಿ ಎಂದು ಆಗ್ರಹಿಸಿದ್ದಾರೆ.