ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಚಾಂಪಿಯನ್ ಆದ ಖುಷಿಯಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಕಾಲಿಗೆ ಬಿದ್ದಾಗ ಜಯ್ ಶಾ ಏನು ಮಾಡಿದ್ರು ಈ ವಿಡಿಯೋ ನೋಡಿ.
ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆದ ಖುಷಿಯಲ್ಲಿ ಸಂಭ್ರಮಿಸಿತು. ಈ ಗೆಲುವನ್ನು ಪ್ರತಿಯೊಬ್ಬ ಭಾರತೀಯರೂ ಸಂಭ್ರಮಿಸಿದರು.
ಇನ್ನು, ಪ್ರಶಸ್ತಿ ವಿತರಣೆ ಸಮಾರಂಭದ ವೇಳೆ ನಾಯಕಿ ಹರ್ಮನ್ ಪ್ರೀತ್ ಕೌರ್ ಮುಖದಲ್ಲಿ ಖುಷಿ ಎದ್ದು ಕಾಣುತ್ತಿತ್ತು. ಇದು ಮಹಿಳಾ ಕ್ರಿಕೆಟ್ ಗೆ ಪ್ರಶಸ್ತಿಯ ಕೊನೆಯಲ್ಲ ಆರಂಭ ಎಂದು ಸಾರಿದರು. ಬಳಿಕ ಖುಷಿ ಖುಷಿಯಿಂದಲೇ ಟ್ರೋಫಿ ಎತ್ತಿಕೊಳ್ಳಲು ಹೋದರು.
ಐಸಿಸಿ ಮುಖ್ಯಸ್ಥರಾಗಿರುವ ಜಯ್ ಶಾ ಟ್ರೋಫಿ ಹಸ್ತಾಂತರಿಸಲು ನಿಂತಿದ್ದರು. ಈ ವೇಳೆ ಹರ್ಮನ್ ನೇರವಾಗಿ ಹೋಗಿ ಜಯ್ ಶಾ ಕಾಲಿಗೆ ನಮಸ್ಕರಿಸಲು ಹೋಗಿದ್ದಾರೆ. ಇದಕ್ಕೆ ಕಾರಣವೂ ಮಹಿಳಾ ಕ್ರಿಕೆಟ್ ಗೆ ಹೊಸ ರೂಪ ನೀಡಿದ್ದೇ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾಗ. ಡಬ್ಲ್ಯುಪಿಎಲ್, ಮಹಿಳಾ ಕ್ರಿಕೆಟಿಗರಿಗೂ ಸಮಾನ ವೇತನ ಇತ್ಯಾದಿ ಪರಿಷ್ಕರಣೆ ತಂದಿದ್ದು ಅವರ ಕಾಲಘಟ್ಟದಲ್ಲಿ. ಹೀಗಾಗಿ ಹರ್ಮನ್ ಟ್ರೋಫಿ ಪಡೆಯುವ ಮೊದಲು ಜಯ್ ಶಾ ಕಾಲಿಗೆ ಬಿದ್ದರು.
ಆದರೆ ಜಯ್ ಶಾ ಹಾಗೆ ಮಾಡಬೇಡಿ ಎಂದು ಹರ್ಮನ್ ಹೇಳಿ ಟ್ರೋಫಿ ವಿತರಿಸಿ ಅಭಿನಂದಿಸಿದರು. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಹಿರಿಯರಿಗೆ ಕಾಲಿಗೆ ಬೀಳುವುದು ನಮ್ಮ ಸಂಪ್ರದಾಯ. ಹರ್ಮನ್ ಇದನ್ನು ಖುಷಿಯ ಸಂದರ್ಭದಲ್ಲೂ ಮರೆಯಲಿಲ್ಲ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು ಜಯ್ ಶಾ ಕಾಲಿಗೆ ಬೀಳುವ ಅಗತ್ಯವಿರಲಿಲ್ಲ ಎಂದು ಟೀಕಿಸಿದವರೂ ಇದ್ದಾರೆ.