ನವದೆಹಲಿ: ಹರ್ಯಾಣದಲ್ಲಿ ಮತಗಳ್ಳತನದ ಆರೋಪ ಮಾಡುವಾಗ ರಾಹುಲ್ ಗಾಂಧಿ ಬ್ರೆಜಿಲ್ ಮಾಡೆಲ್ ಬಗ್ಗೆ ಉಲ್ಲೇಖಿಸಿದ್ದರು. ಇದೀಗ ಅದೇ ಮಾಡೆಲ್ ಈ ಬಗ್ಗೆ ಶಾಕಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಹರ್ಯಾಣದಲ್ಲಿ 25 ಲಕ್ಷ ಮತಗಳ್ಳತನವಾಗಿದೆ. ಬ್ರೆಜಿಲ್ ಮಾಡೆಲ್ 22 ಬಾರಿ ಮತ ಚಲಾಯಿಸಿದ್ದಾಳೆ ಎಂದು ರಾಹುಲ್ ಗಾಂಧಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದರು. ಜೊತೆಗೆ ಆ ಮಾಡೆಲ್ ಫೋಟೋವನ್ನು ಪ್ರಕಟಿಸಿದ್ದು, ಇದೇ ಐಡಿಯಿಂದ ಬೇರೆ ಬೇರೆ ಹೆಸರಿನಲ್ಲಿ ಮತ ಚಲಾವಣೆಯಾಗಿದೆ ಎಂದಿದ್ದರು.
ಇದೀಗ ರಾಹುಲ್ ಆರೋಪಗಳನ್ನು ಅದೇ ಮಾಡೆಲ್ ಅಲ್ಲಗಳೆದಿದ್ದಾರೆ. ಬ್ರೆಜಿಲ್ ಮಾಡೆಲ್ ಲಾರಿಸಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅದು ನನ್ನ ಹಳೆಯ ಫೋಟೋ. ಅದನ್ನು ಬಳಸಿ ಸೀಮಾ, ಸರಸ್ವತಿ, ಸ್ವೀಟಿ ಎಂದೆಲ್ಲಾ ಹೇಳುತ್ತಿದ್ದಾರೆ. ಇದು ರಾಜಕೀಯ ನಾಟಕವೆನಿಸುತ್ತದೆ. ಮಾಧ್ಯಮಗಳೂ ಈಗ ನನ್ನ ಬಳಿ ಪ್ರತಿಕ್ರಿಯೆ ಕೇಳುತ್ತಿವೆ.
ಈ ಫೋಟೋ ನನ್ನ ಮಾಡೆಲಿಂಗ್ ಆರಂಭಿಕ ದಿನಗಳ ಫೋಟೋ. ಆದರೆ ಭಾರತದ ಚುನಾವಣೆ ಅಕ್ರಮದಲ್ಲಿ ನನ್ನ ಹೆಸರು ಕೇಳಿಬಂದಿದ್ದು ಹೇಗೆ ಎಂದೇ ಅಚ್ಚರಿಯಾಗುತ್ತಿದೆ. ನಾನೀಗ ಮಾಡೆಲ್ ಆಗಿಯೂ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಭಾರತದ ರಾಜಕೀಯಕ್ಕೂ ನನಗೂ ಸಂಬಂಧವೇ ಇಲ್ಲ. ನನ್ನ ಫೋಟೋವನ್ನು ಸ್ಟಾಕ್ ಇಮೇಜ್ ನಿಂದ ಖರೀದಿಸಲಾಗಿದೆ. ನಾನು ಎಂದಿಗೂ ಭಾರತಕ್ಕೆ ಹೋಗಿಯೇ ಇಲ್ಲ ಎಂದಿದ್ದಾರೆ.