Select Your Language

Notifications

webdunia
webdunia
webdunia
webdunia

ವಿಶ್ವಕಪ್‌ ಗೆದ್ದ ಚಾರಿತ್ರಿಕ ಸಾಧನೆ ಮೆರೆದ ಭಾರತದ ವನಿತೆಯರಿಗೆ ಟಾಟಾ ಸಂಸ್ಥೆಯಿಂದ ಭರ್ಜರಿ ಗಿಫ್ಟ್‌

ICC Women's ODI World Cup, Harmanpreet Kaur, Automobile Company Tata Motors

Sampriya

ಮುಂಬೈ , ಗುರುವಾರ, 6 ನವೆಂಬರ್ 2025 (14:48 IST)
Photo Credit X
ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಅನ್ನು ಮೊದಲ ಬಾರಿ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರಿಗೆ ಬಹುಮಾನಗಳ ಸುರಿಮಳೆ ಹರಿದುಬರುತ್ತಿದೆ. 

ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ದೇಶದ ಪ್ರಮುಖ ಆಟೋಮೊಬೈಲ್ ಕಂಪೆನಿ ಟಾಟಾ ಮೋಟರ್ಸ್ ಭರ್ಜರಿ ಉಡುಗೊರೆ ಘೋಷಿಸಿದೆ. ನವೆಂಬರ್ 2 ರಂದು ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 52 ರನ್​ಗಳ ಜಯ ಸಾಧಿಸಿತ್ತು.  

ಈ ಐತಿಹಾಸಿಕ ಸಾಧನೆಗಾಗಿ ಇದೀಗ ಟಾಟಾ ಕಂಪೆನಿಯು ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಹೊಚ್ಚ ಹೊಸ ಟಾಟಾ ಸಿಯೆರಾ ಎಸ್‌ಯುವಿ ಕಾರನ್ನು ನೀಡುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳಿಗೂ ಈ ಉಡುಗೊರೆ ಸಿಗಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ, ಭಾರತೀಯ ಮಹಿಳಾ ತಂಡವು ತನ್ನ ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ದೇಶಕ್ಕೆ ಹೆಮ್ಮೆಯ ಕ್ಷಣವನ್ನು ನೀಡಿದೆ. ಅವರ ಸಾಧನೆಗಳನ್ನು ಗೌರವಿಸಲು ನಾವು ಸಂತೋಷಪಡುತ್ತೇವೆ.

ಟಾಟಾ ಸಿಯೆರಾ ಕಾರಿನ ಹೊಸ ಮಾಡೆಲ್ ಇನ್ನೂ ಸಹ ಬಿಡುಗಡೆಯಾಗಿಲ್ಲ. 90 ರ ದಶಕದಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಸಿಯೆರಾ ಕಾರಿಗೆ ಇದೀಗ ಆಧುನಿಕ ಟಚ್ ನೀಡಲಾಗಿದ್ದು, ಈ ಮೂಲಕ ಟಾಟಾ ಕಂಪೆನಿ ಮತ್ತೊಮ್ಮೆ ತನ್ನ ಐಕಾನ್ ಕಾರನ್ನು ರಸ್ತೆಗಿಳಿಸಲು ನಿರ್ಧರಿಸಿದೆ. 

ಇದೇ ನವೆಂಬರ್ 25 ರಂದು ಟಾಟಾ ಸಿಯೆರಾ ಕಾರು ಬಿಡುಗಡೆಯಾಗಲಿದೆ. ಇದೇ ವೇಳೆ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಕಾರನ್ನು ಹಸ್ತಾಂತರಿಸುವ ಸಾಧ್ಯತೆಯಿದೆ. ಟಾಟಾ ಸಿಯೆರಾ ಕಾರಿನ ಎಕ್ಸ್-ಶೋರೂಮ್ ಬೆಲೆ ಸರಿಸುಮಾರು ₹13.50 ಲಕ್ಷದಿಂದ ₹24 ಲಕ್ಷ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಸಿಬಿ ತಂಡ ಮಾರಾಟವಾಗೋದು ಪಕ್ಕಾ: ಮುಂದಿನ ವರ್ಷದಲ್ಲೇ ಫ್ರ್ಯಾಂಚೈಸಿಗೆ ಹೊಸ ಮಾಲೀಕರು