ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 2025ರ ಚಾಂಪಿಯನ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರಾಟವಾಗೋದು ಪಕ್ಕಾ ಆಗಿದೆ. ಈ ಬಗ್ಗೆ ತಂಡ ಫ್ರ್ಯಾಂಚೈಸಿ ಖಚಿತಪಡಿಸಿದೆ.
2024ರಲ್ಲಿ ಡಬ್ಲ್ಯುಪಿಎಲ್ ಮತ್ತು 2025ರಲ್ಲಿ ಐಪಿಎಲ್ ಟ್ರೋಫಿಗಳನ್ನು ಗೆಲ್ಲುವಲ್ಲಿ ಆರ್‌ಸಿಬಿ ತಂಡಗಳು ಯಶಸ್ವಿಯಾಗಿದ್ದು, ಫ್ರಾಂಚೈಸಿಯ ಮಾರಾಟದ ವದಂತಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಶೀಘ್ರದಲ್ಲೇ ಆರ್‌ಸಿಬಿ ಈಗ ಅಧಿಕೃತವಾಗಿ ಮಾರಾಟವಾಗುತ್ತಿದೆ.
ಪುರುಷ ಮತ್ತು ಮಹಿಳಾ ಆರ್‌ಸಿಬಿಯ ಮಾಲೀಕರಾದ ಡಿಯಾಜಿಯೊ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು ಮಾರ್ಚ್ 31, 2026 ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವ ಭರವಸೆ ನೀಡಿದೆ.
ಯುಎಸ್‌ಎ ತನ್ನ ಸ್ವಾಮ್ಯದ ಅಂಗಸಂಸ್ಥೆಯಾದ ಆರ್‌ಸಿಎಸ್‌ಪಿಎಲ್‌ನಲ್ಲಿನ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆ ಪ್ರಾರಂಭಿಸುತ್ತಿದೆ. ತನ್ನ ವ್ಯವಹಾರವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ತಂಡದ ಮಾಲೀಕತ್ವವನ್ನು ಒಳಗೊಂಡಿದೆ.
2024ರಲ್ಲಿ ಸ್ಮೃತಿ ಮಂದಾನ ನೇತೃತ್ವದಲ್ಲಿ ಫ್ರಾಂಚೈಸಿಯು ಡಬ್ಲ್ಯುಪಿಎಲ್ ಪ್ರಶಸ್ತಿಯನ್ನು ಮತ್ತು 2025 ರಲ್ಲಿ ರಜತ್ ಪಾಟೀದಾರ್ ನಾಯಕತ್ವದಲ್ಲಿ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ವಿವಿಧ ಮಾಧ್ಯಮ ವರದಿಗಳು ಡಿಯಾಜಿಯೊ ಎರಡೂ ತಂಡಗಳಿಗೆ 2 ಬಿಲಿಯನ್ ಯುಎಸ್ ಡಾಲರ್‌ಗಳನ್ನು ಕೇಳುತ್ತಿದೆ ಎನ್ನಲಾಗಿತ್ತು.