ಕ್ವೀನ್ಸ್ ಲ್ಯಾಂಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ಟಾಸ್ ಸೋತಿದೆ. ಇದನ್ನು ನೋಡುತ್ತಿದ್ದರೆ ಟಾಸ್ ಗೆಲ್ಲೋದು ಭಾರತದ ಹಣೆಬರಹದಲ್ಲೇ ಇಲ್ಲ ಎನಿಸುತ್ತಿದೆ.
ಆಸ್ಟ್ರೇಲಿಯಾದಲ್ಲಿ ಏಕದಿನ ಮತ್ತು ಟಿ20 ಸರಣಿ ಆಡಲು ಬಂದಿರುವ ಟೀಂ ಇಂಡಿಯಾ ಇದುವರೆಗೆ ಎರಡೂ ಸರಣಿಗಳಲ್ಲಿ ಸೇರಿ ಟಾಸ್ ಗೆದ್ದಿದ್ದು ಕೇವಲ 1 ಬಾರಿ ಮಾತ್ರ. ಏಕದಿನ ಪಂದ್ಯಗಳಲ್ಲಿ ಮೂರೂ ಪಂದ್ಯಗಳಲ್ಲೂ ಟಾಸ್ ಸೋತಿತ್ತು. ಈ ಸರಣಿಯನ್ನೂ ಟೀಂ ಇಂಡಿಯಾ ಸೋತಿತ್ತು.
ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಗೆ ಆಹುತಿಯಾದರೆ ಎರಡನೇ ಪಂದ್ಯದಲ್ಲಿ ಟಾಸ್ ಸೋತಿತ್ತು. ಈ ವೇಳೆ ಹತಾಶೆಗೊಳಗಾದ ಸೂರ್ಯ ಇನ್ನು ಟಾಸ್ ಗೆಲ್ಲಬೇಕಾದರೆ ಪೂಜೆ ಮಾಡಬೇಕಷ್ಟೇ ಎಂದು ತಮಾಷೆಯಾಗಿ ಸನ್ನೆ ಮಾಡಿದ್ದರು.
ಮೂರನೇ ಪಂದ್ಯದಲ್ಲಿ ಅಂತೂ ಇಂತೂ ಭಾರತ ಟಾಸ್ ಗೆದ್ದಿತು. ಈ ಪಂದ್ಯವನ್ನೂ ಗೆದ್ದುಕೊಂಡಿತ್ತು. ಆದರೆ ಈ ಸಂತೋಷ ಕೇವಲ ಒಂದೇ ಪಂದ್ಯಕ್ಕೆ ಸೀಮಿತವಾಗಿದೆ. ನಾಲ್ಕನೇ ಪಂದ್ಯದಲ್ಲಿ ಮತ್ತೆ ಭಾರತ ಟಾಸ್ ಸೋತಿದೆ. ಇಂದು ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಇಂದಿನ ಪಂದ್ಯಕ್ಕೆ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿದಿದೆ. ಅತ್ತ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ 20 ಬಾರಿ ಟಾಸ್ ಗೆದ್ದಿದ್ದಾರೆ. 20 ಬಾರಿಯೂ ಅವರು ಚೇಸಿಂಗ್ ಮಾಡಿ ಪಂದ್ಯ ಗೆದ್ದಿದ್ದಾರೆ. ಇಂದಿನ ಫಲಿತಾಂಶ ಏನಾಗುವುದೋ ನೋಡಬೇಕಿದೆ.