ಅರ್ಷ್ ದೀಪ್ ಸಿಂಗ್ ರನ್ನು ಕಡೆಗಣಿಸಿ ಹರ್ಷಿತ್ ರಾಣಾಗೆ ಪದೇ ಪದೇ ಅವಕಾಶ ನೀಡುತ್ತಿದ್ದ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ರನ್ನು ಈಗ ನೆಟ್ಟಿಗರು ಇನ್ನಿಲ್ಲದಂತೆ ರೋಸ್ಟ್ ಮಾಡುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಟಿ20 ಪಂದ್ಯಗಳಿಗೆ ಈ ಮಾದರಿಯ ಸ್ಪೆಷಲಿಸ್ಟ್ ಬೌಲರ್ ಅರ್ಷ್ ದೀಪ್ ಸಿಂಗ್ ರನ್ನು ಕಡೆಗಣಿಸಿ ತಮ್ಮ ಮೆಚ್ಚಿನ ಹರ್ಷಿತ್ ರಾಣಾಗೆ ಗೌತಮ್ ಗಂಭೀರ್ ಅವಕಾಶ ಕೊಟ್ಟಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಕೊನೆಗೆ ಈಗ ಮೂರನೇ ಪಂದ್ಯದಲ್ಲಿ ಭಾರತ ಗೆಲ್ಲುವ ಒತ್ತಡದಲ್ಲಿದ್ದಾಗ ಗಂಭಿರ್ ಅನಿವಾರ್ಯವಾಗಿ ಹರ್ಷಿತ್ ರನ್ನು ಪಕ್ಕಕ್ಕಿಟ್ಟು ಅರ್ಷ್ ದೀಪ್ ಸಿಂಗ್ ರನ್ನು ಆಡಿಸಿದ್ದಾರೆ. ಈ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಅರ್ಷ್ ದೀಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಇದಾದ ಬಳಿಕ ನೆಟ್ಟಿಗರು ಗಂಭೀರ್ ರನ್ನು ಟ್ರೋಲ್ ಮಾಡುತ್ತಿದ್ದಾರೆ. ಗಂಭೀರ್ ಕತ್ತು ಹಿಡಿದು ಅರ್ಷ್ ದೀಪ್ ಸಾಕಾ ಇನ್ನೂ ಬೇಕಾ ಎಂದು ಕೇಳುವ ರೀತಿಯಲ್ಲಿ ಮೆಮೆ ಸೃಷ್ಟಿಸಿ ಟ್ರೋಲ್ ಮಾಡುತ್ತಿದ್ದಾರೆ. ಗಂಭೀರ್ ಗೆ ಈಗಲಾದರೂ ಅರ್ಷ್ ದೀಪ್ ಟಿ20 ಯಲ್ಲಿ ಯಾಕೆ ಬೇಕು ಎನ್ನುವುದು ಅರ್ಥವಾಗಲಿ ಎಂದು ಕಿಡಿ ಕಾರಿದ್ದಾರೆ.