Select Your Language

Notifications

webdunia
webdunia
webdunia
webdunia

IND vs AUS T20: ಕೊನೆಗೂ ಲಯಕ್ಕೆ ಬಂದ ಭಾರತ, ಸರಣಿ ಸಮಬಲ

Team India t20

Sampriya

ಹೋಬಾರ್ಟ್ , ಭಾನುವಾರ, 2 ನವೆಂಬರ್ 2025 (18:23 IST)
Photo Credit X
ಹೋಬಾರ್ಟ್: ಆಸ್ಟ್ರೇಲಿಯಾದ ಹೋಬಾರ್ಟ್ ನ ಬೆಲ್ಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳ ಅಮೋಘ ಜಯ ಗಳಿಸಿತು. .

ಮೊದಲು ಬೌಲಿಂಗ್ ಮಾಡಿ, ಆಸ್ಟ್ರೇಲಿಯವನ್ನು 187 ರನ್‌ಗೆ ಕಟ್ಟಿ ಹಾಕಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿ ಮುಟ್ಟಿದೆ.

ಭಾರತದ ಪರ ಅಭಿಷೇಕ್ ಶರ್ಮಾ 16 ಎಸೆತಕ್ಕೆ 25ರನ್, ಶುಭ್ಮನ್ ಗಿಲ್‌ 12 ಎಸೆತಕ್ಕೆ 15 ರನ್, ಸೂರ್ಯ ಕುಮಾರ್ ಯಾದವ್‌ 11 ಎಸೆತಕ್ಕೆ  24, ತಿಲಕ್ ವರ್ಮಾ 26ಎಸೆತಕ್ಕೆ 29ರನ್, ಅಕ್ಸರ್ ಪಟೇಲ್  12 ಎಸೆತಕ್ಕೆ 17 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ (23 ಎಸೆತಕ್ಕೆ 49ರನ್) ಮತ್ತು ಜಿತೇಶ್ ಶರ್ಮಾ (13 ಎಸೆತಕ್ಕೆ 22ರನ್‌)22 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು.

ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್ 3, ಬಾರ್ಟ್ಲೆಟ್ ಮತ್ತು ಮಾರ್ಕಸ್ ಸ್ಟಾಯ್ನಿಸ್ ತಲಾ 1 ವಿಕೆಟ್ ಪಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಕಾಕುಳಂ ಕಾಲ್ತುಳಿತ: ವೆಂಕಟೇಶ್ವರ್ ಸ್ವಾಮಿ ದೇವಸ್ಥಾನಕ್ಕೆ ಇಂದು ಭಕ್ತರಿಗಿಲ್ಲ ಎಂಟ್ರಿ