Select Your Language

Notifications

webdunia
webdunia
webdunia
webdunia

IND vs AUS: ಟಿ20 ಯಲ್ಲೂ ಆಸ್ಟ್ರೇಲಿಯಾ ಕೈಲಿ ಹೊಡೆಸಿಕೊಂಡ ಟೀಂ ಇಂಡಿಯಾ

Team India

Krishnaveni K

ಮೆಲ್ಬೊರ್ನ್ , ಶುಕ್ರವಾರ, 31 ಅಕ್ಟೋಬರ್ 2025 (16:55 IST)
Photo Credit: X
ಮೆಲ್ಬೊರ್ನ್: ಏಕದಿನ ಸರಣಿ ಸೋಲಿನ ಬಳಿಕ ಟಿ20 ಸರಣಿಯಲ್ಲೂ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲೇ ಗತಿಯಾಗಿದೆ. ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಸೋತಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟಿಂಗ್ ಕುಸಿತದಿಂದಾಗಿ 125 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಅಭಿಷೇಕ್ ಶರ್ಮಾ 38, ಹರ್ಷಿತ್ ರಾಣಾ 35 ರನ್ ಬಿಟ್ಟರೆ ಉಳಿದವರದ್ದು ಏಕಂಕಿ ಸ್ಕೋರ್.

ಈ ಮೊತ್ತವನ್ನು ಆಸ್ಟ್ರೇಲಿಯಾ ಸುಲಭವಾಗಿ ಬೆನ್ನತ್ತಿ 13.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ 46, ಟ್ರಾವಿಸ್ ಹೆಡ್ 28,  ಜೋಶ್ ಇಂಗ್ಲಿಷ್ 20 ರನ್ ಗಳಿಸಿದರು. ಭಾರತದ ಪರ ವರುಣ್ ಚಕ್ರವರ್ತಿ , ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ  ತಲಾ 2 ವಿಕೆಟ್ ಕಬಳಿಸಿದರು. ವಿಪರ್ಯಾಸವೆಂದರೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಕೊನೆಯ ಹಂತದಲ್ಲಿ ಸತತ ವಿಕೆಟ್ ಪಡೆದರು. ಆದರೆ ಅಷ್ಟರಲ್ಲಿ ಸಮಯ ಮೀರಿತ್ತು. ಅತ್ತ ಹರ್ಷಿತ್ ರಾಣಾ ಕೇವಲ ಬ್ಯಾಟಿಂಗೆ ಸೀಮಿತವಾದಂತಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಮಳೆಗೆ ರದ್ದಾಗಿತ್ತು. ಸರಣಿ ಗೆಲ್ಲಬೇಕಾದರೆ ಇನ್ನು ಉಳಿದ ಮೂರೂ ಪಂದ್ಯಗಳನ್ನು ಗೆಲ್ಲುವ ಒತ್ತಡ ಭಾರತಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಷೇಕ್‌ ಶರ್ಮಾ ಬ್ಯಾಗ್‌ ನೋಡಿ ಹರ್ಷದೀಪ್‌, ಶುಭ್ಮನ್ ಗಿಲ್ ಹೀಗೇ ಕಾಲೆಳೆಯುವುದಾ